Saturday, December 20, 2025

Bedwetting | ಮಕ್ಕಳಲ್ಲಿನ ‘ಬೆಡ್ ವೆಟ್ಟಿಂಗ್’ ಸಮಸ್ಯೆಗೆ ಇಲ್ಲಿದೆ ಆಯುರ್ವೇದದ ರಾಮಬಾಣ ಚಿಕಿತ್ಸೆ!

ಮಕ್ಕಳು ಚಿಕ್ಕವರಿರುವಾಗ ಹಾಸಿಗೆಯಲ್ಲಿ ಮೂತ್ರ ಮಾಡುವುದು ಸಾಮಾನ್ಯ. ಆದರೆ 5 ವರ್ಷ ಕಳೆದ ಮೇಲೂ ಮಗು ರಾತ್ರಿ ನಿದ್ರೆಯಲ್ಲಿ ಮೂತ್ರ ಮಾಡುತ್ತಿದ್ದರೆ ಅದನ್ನು ಕೇವಲ ಅಭ್ಯಾಸ ಎಂದು ನಿರ್ಲಕ್ಷಿಸಬೇಡಿ. ಇದು ಅವರ ದೈಹಿಕ ಅಥವಾ ಮಾನಸಿಕ ಆರೋಗ್ಯದ ಸಂಕೇತವಾಗಿರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳು ಇಲ್ಲಿವೆ:

ಅಪಕ್ವ ಮೂತ್ರಕೋಶ: ಮಗುವಿನ ಮೂತ್ರಕೋಶ ಸಂಪೂರ್ಣವಾಗಿ ಅಭಿವೃದ್ಧಿ ಹೊಂದದಿದ್ದರೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ.

ಆಳವಾದ ನಿದ್ರೆ: ಮಗು ಗಾಢ ನಿದ್ರೆಯಲ್ಲಿದ್ದಾಗ, ಮೂತ್ರಕೋಶ ತುಂಬಿರುವ ಬಗ್ಗೆ ಮೆದುಳಿಗೆ ಸರಿಯಾದ ಸಂಕೇತ ತಲುಪದಿರುವುದು.

ಸೋಂಕು: ಮೂತ್ರನಾಳದ ಸೋಂಕಿನಿಂದ ಮಗು ಬಳಲುತ್ತಿರಬಹುದು, ಇದನ್ನು ಪೋಷಕರು ಗಮನಿಸುವುದು ಮುಖ್ಯ.

ಆನುವಂಶಿಕತೆ: ಪೋಷಕರಲ್ಲಿ ಬಾಲ್ಯದಲ್ಲಿ ಈ ಸಮಸ್ಯೆ ಇದ್ದರೆ, ಅದು ಮಕ್ಕಳಿಗೂ ಬರುವ ಸಾಧ್ಯತೆ ಇರುತ್ತದೆ.

ಹಾರ್ಮೋನ್ ಕೊರತೆ: ದೇಹದಲ್ಲಿ ಮೂತ್ರದ ಪ್ರಮಾಣವನ್ನು ನಿಯಂತ್ರಿಸುವ ಹಾರ್ಮೋನ್ ಮಟ್ಟ ಕಡಿಮೆಯಾದಾಗ ಈ ಸಮಸ್ಯೆ ಉಂಟಾಗುತ್ತದೆ.

ಮಾನಸಿಕ ಒತ್ತಡ: ಮಗುವಿನ ಮನಸ್ಸಿನ ಮೇಲಾಗುವ ಕೆಲವು ಪರಿಣಾಮಗಳು ಕೂಡ ಇದಕ್ಕೆ ಕಾರಣವಾಗಬಹುದು.

ಈ ಸಮಸ್ಯೆಯನ್ನು ಹೋಗಲಾಡಿಸಲು ಮನೆಯಲ್ಲಿಯೇ ಈ ಕೆಳಗಿನ ಔಷಧಿಗಳನ್ನು ತಯಾರಿಸಬಹುದು:

ಎಳ್ಳು ಮತ್ತು ಓಂ ಕಾಳಿನ ಮಾತ್ರೆ:

ಬೇಕಾಗುವ ಪದಾರ್ಥಗಳು: 50 ಗ್ರಾಂ ಕಪ್ಪು ಎಳ್ಳು, 25 ಗ್ರಾಂ ಓಂ ಕಾಳು ಮತ್ತು 100 ಗ್ರಾಂ ಬೆಲ್ಲ.

ತಯಾರಿಸುವ ವಿಧಾನ: ಎಳ್ಳು ಮತ್ತು ಓಂ ಕಾಳನ್ನು ನುಣ್ಣಗೆ ಪುಡಿ ಮಾಡಿ. ಇದಕ್ಕೆ ಮೆತ್ತಗಿನ ಬೆಲ್ಲವನ್ನು ಸೇರಿಸಿ ಸಣ್ಣ ಮಾತ್ರೆಗಳಂತೆ ತಯಾರಿಸಿ.

ಬಳಕೆ: ಪ್ರತಿದಿನ ಎರಡು ಮಾತ್ರೆಗಳನ್ನು ಹಾಲಿನೊಂದಿಗೆ ಮಗುವಿಗೆ ನೀಡಿ.

ಆಮ್ಲಾ ಮತ್ತು ಜೇನುತುಪ್ಪ:

ಅರ್ಧ ಚಮಚ ಆಮ್ಲಾ (ನೆಲ್ಲಿಕಾಯಿ) ಪುಡಿಯನ್ನು ಎರಡು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಇದನ್ನು ದಿನಕ್ಕೆ ಎರಡು ಬಾರಿ (ಬೆಳಿಗ್ಗೆ ಮತ್ತು ಸಂಜೆ) ಮಗುವಿಗೆ ನೀಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

error: Content is protected !!