ರಾಜ್ಯದಲ್ಲಿ ಮತ್ತೆ ಬಿಯರ್ ಬೆಲೆ ಏರಿಕೆ, ಸಕ್ಕರೆ ಅಂಶ ಕಡಿಮೆ ಮಾಡಲು ಬ್ರೂವರೀಸ್‌ಗಳಿಗೆ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯದಲ್ಲಿ ಬಿಯರ್ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಸೋಮವಾರದಿಂದಲೇ ಪರಿಷ್ಕೃತ ಬೆಲೆಗಳು ಸೋಮವಾರದಿಂದ ಜಾರಿಗೆ ಬಂದಿವೆ.

ಬಿಯರ್ ಮೇಲಿನ ಸುಂಕ ಹೆಚ್ಚಳದ ಕುರಿತು ರಾಜ್ಯ ಸರ್ಕಾರ ಆಗಸ್ಟ್ 23, 2024 ರಂದು ಕರಡು ಅಧಿಸೂಚನೆಯನ್ನು ಹೊರಡಿಸಿತು. ಇದರ ಕುರಿತು ಅಂತಿಮ ಅಧಿಸೂಚನೆಯನ್ನು ಜನವರಿ 8 ರಂದು ಹೊರಡಿಸಲಾಗಿತ್ತು.

ಇನ್ನು ಮುಂದೆ ಬಿಯರ್ ಬೆಲೆಗಳು ಆಲ್ಕೋಹಾಲ್ ಅಂಶವನ್ನು ಅವಲಂಬಿಸಿರುತ್ತದೆ. ಆಲ್ಕೋಹಾಲ್ ಅಂಶವನ್ನು ಅವಲಂಬಿಸಿ ಇದನ್ನು ಎರಡು ಸ್ಲ್ಯಾಬ್‌ಗಳಾಗಿ ವರ್ಗೀಕರಿಸಲಾಗಿದೆ. ಅಲ್ಕೋಹಾಲ್ ಅಂಶ ಶೇ.5ಕ್ಕಿಂತ ಕಡಿಮೆ ಇರುವ ಅಥವಾ ಅದಕ್ಕೆ ಸಮಾನವಾಗಿರುವ ಮೈಲ್ಡ್ ಬಿಯರ್ ಬೆಲೆಯನ್ನು ಪ್ರತಿ ಬಲ್ಕ್ ಲೀಟರ್ ಗೆ 12 ರೂ ಮತ್ತು ಶೇ 5-8 ರಷ್ಟು ಆಲ್ಕೋಹಾಲ್ ಹೊಂದಿರುವ ಸ್ಟ್ರಾಂಗ್ ಬಿಯರ್‌ಗಳಿಗೆ ರೂ. 20 ಎಂದು ನಿಗದಿಪಡಿಸಲಾಗಿದೆ.

ಸಕ್ಕರೆ ಬಳಕೆ ಅಥವಾ ಬಳಸದೆ ಮಾಲ್ಟ್ ಅಥವಾ ಧಾನ್ಯದಿಂದ ಹುದುಗಿಸಿದ ಮದ್ಯವನ್ನು ತಯಾರಿಸಬೇಕು. ಸಕ್ಕರೆ ಪ್ರಮಾಣ ಶೇ.25ಕ್ಕಿಂತ ಹೆಚ್ಚಿರಬಾರದು ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಬ್ರೂವರೀಸ್‌ಗಳಿಗೆ ಸರ್ಕಾರ ಸೂಚನೆ ನೀಡಿದೆ. ಇನ್ನು ಮುಂದೆ ಎಲ್ಲಾ ಬ್ರೂವರೀಸ್‌ಗಳು ಬಿಯರ್‌ ತಯಾರಿಕೆಗೆ ಬಳಸುವ ಅಂಶಗಳನ್ನು ಕಡ್ಡಾಯವಾಗಿ ಘೋಷಿಸಬೇಕಾಗುತ್ತದೆ.

ಸಕ್ಕರೆ ಅಂಶ ಶೂನ್ಯವಾಗಿರಬಹುದು ಆದರೆ ಶೇ.25ಕ್ಕಿಂತ ಹೆಚ್ಚು ಇರಬಾರದು. ಹೊಸ ದರಗಳು ಸೋಮವಾರದಿಂದ ಜಾರಿಗೆ ಬಂದಿವೆ. ಹೊಸ ಲೇಬಲ್‌ಗಳಿಗಾಗಿ ಬ್ರೂವರೀಸ್‌ಗಳಿಗೆ ಅಬಕಾರಿ ಇಲಾಖೆ ಫೆಬ್ರವರಿ 1 ರವರೆಗೆ ಸಮಯ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!