ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಕಲಿಯುವುದಕ್ಕಿಂತ ಮುನ್ನ ಪಕ್ಕದ ರಾಜ್ಯಗಳ ಭಾಷೆ ಕಲಿಯಿರಿ ಎಂದು ನಟ ಕಮಲ್ ಹಾಸನ್ ಭಾಷಾ ವಿವಾದದ ಕುರಿತು ಮಾತನಾಡಿದ್ದಾರೆ.
ತಮ್ಮ ಮುಂಬರುವ ಚಿತ್ರ ಥಗ್ ಲೈಫ್ ಚಿತ್ರದ ಪ್ರಚಾರ ಸಂದರ್ಭದಲ್ಲಿ ಹಿಂದಿ ಹೇರಿಕೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ‘ನೀವು ತಮಿಳುನಾಡಿನಲ್ಲಿ ಮಲಯಾಳಂ ಮಾತನಾಡಬಹುದು, ಆದರೆ ನೀವು ಬಹಳ ಸಮಯ ಮಾತನಾಡಿದರೆ, ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ ನೀವು ಕೇರಳದಲ್ಲಿ ತಮಿಳು ಮಾತನಾಡಿದರೆ, ಜನರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ’.
ನಮ್ಮ ಭಾಷೆ ಕಣ್ಮರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಈನಾವೆಲ್ಲರೂ ದ್ರಾವಿಡರು. ಒಂದೇ ಕುಟುಂಬ. ಎಂದು ಹೇಳಿದ್ದಾರೆ.