ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬಾರೀ ಶಾಕ್ ಎದುರಾಗಿದೆ. ತಂಡವು ಹರಾಜಿನಲ್ಲಿ ಭಾರೀ ನಿರೀಕ್ಷೆಯಿಟ್ಟುಕೊಂಡು ಖರೀದಿಸಿದ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಈ ಬಾರಿಯ ಐಪಿಎಲ್ ನಿಂದ ಹೊರಬಿದ್ದಿದ್ದಾರೆ.
ಇತ್ತೀಚೆಗೆ ನಡೆದ ವೆಸ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ವೇಳೆ ಮಾರ್ಕ್ ವುಡ್ ಗಾಯಗೊಂಡಿದ್ದರು. ಗಾಯದ ಸ್ವರೂಪ ಗಂಭೀರವಾಗಿರುವುದರಿಂದ ವುಡ್ ಐಪಿಎಲ್ ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಪ್ರಮುಖ ಬೌಲರ್ ಟೂರ್ನಿಯಿಂದ ಹೊರಬಿದ್ದಿದ್ದರಿಂದ ಲಕ್ನೋ ತಂಡಕ್ಕೆ ಹೊಡೆತ ಬಿದ್ದಿದ್ದು, ವುಡ್ ಸ್ಥಾನಕ್ಕೆ ಬದಲಿಯಾಗಿ ಯಾವ ಆಟಗಾರನನ್ನು ಕರೆತರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಲಕ್ನೋ ತಂಡವು ವೇಗದ ಬೌಲಿಂಗ್ ವಿಭಾಗದಲ್ಲಿ ಜೇಸನ್ ಹೋಲ್ಡರ್, ಮಾರ್ಕಸ್ ಸ್ಟೊಯಿನಿಸ್, ಆವೇಶ್ ಖಾನ್ ರನ್ನು ಹೊಂದಿದ್ದು, ಸ್ಪಿನ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್ ಹಾಗೂ ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್ ರಂತಹ ಪ್ರಖ್ಯಾತರನ್ನು ಹೊಂದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ