ಹೊಸದಿಗಂತ ಹುಬ್ಬಳ್ಳಿ:
ಸದ್ಯ ಮಾಡಿರುವ ಎಲ್ಲಾ ಸರ್ವೇಗಳಲ್ಲಿ ಕಾಂಗ್ರೆಸ್ ಹಿನ್ನಡೆಯಾಗಿದೆ. ಆದ್ದರಿಂದ ಕಾಂಗ್ರೆಸ್ ಹತಾಶಗೊಂಡು ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ವೇಗಳ ಪ್ರಕಾರ ಕಾಂಗ್ರೆಸ್ ಎರಡು ಮೂರು ಸ್ಥಾನ ಗೆದ್ದರೆ ಜಾಸ್ತಿ. ಸಿ ವೋಟರ್, ಎಬಿಸಿ ಸಮೀಕ್ಷೆಯಲ್ಲಿ ಎರಡು ಮೂರು ತೋರಿಸಿದೆ. ಹೀಗಾಗಿ ಕಾಂಗ್ರೆಸ್ ಹತಾಶಗೊಂಡು ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ಜನ ಅವರಿಗೆ ತಕ್ಕ ಪಾಠ ಕಲಿಸತ್ತಾರೆ ಎಂದರು.
ಯಾರು ಗಲಾಟೆ ಮಾಡುತ್ತಾರೆ. ಯಾರು ಧಿಕ್ಕಾರ ಕೂಗತ್ತಾರೆ. ಅವರಿಗೆ ಜನ ತಕ್ಕ ಪಾಠ ಕಲಸತ್ತಾರೆ. ದೇವೆಗೌಡರು ಅತ್ಯಂತ ಹಿರಿಯ ಜೀವಿ. ಕರ್ನಾಟಕದ ಏಕೈಕ ಪ್ರಧಾನಿ. ಅವರಿಗೆ ಕನಿಷ್ಠ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ನಾನು ಇದನ್ನು ಖಂಡಸುತ್ತೇನೆ ಎಂದರು.