ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಬ್ಯಾನರ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಈ ನಡುವೆ ಬ್ರೂಸ್ಪೇಟೆ ಪೊಲೀಸರು ಒಟ್ಟು 20 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಒಟ್ಟು ಆರು ಎಫ್ಐಆರ್ ದಾಖಲಾಗಿದ್ದು,ಒಟ್ಟು 20 ಜನರನ್ನು ಬಂಧಿಸಿದ್ದಾರೆ. 10 ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಬಂಧಿತ ಬಿಜೆಪಿ ಕಾರ್ಯಕರ್ತರು
ಬಿ.ರವಿ, ರವಿಬಾಬು, ಪೋತಪ್ಪ, ಬಜ್ಜಪ್ಪ, ಜಿ.ಶ್ರೀನಿವಾಸ, ಷಡಕ್ಷರಿ, ರಂಗಸ್ವಾಮಿ, ಗುರುಪ್ರಸಾದ್, ಪಿ.ಶ್ರೀನಿವಾಸ ರೆಡ್ಡಿ, ಲಕ್ಷಣ, ತಿಮ್ಮಪ್ಪ ಬಂಧನಕ್ಕೆ ಒಳಗಾದವರ ಬಿಜೆಪಿ ಕಾರ್ಯಕರ್ತರು.
ಬಂಧಿತ ಕೈ ಕಾರ್ಯಕರ್ತರ ಪಟ್ಟಿ
ಕಾರ್ತಿಕ್(25), ಮುಕ್ಕಣ್ಣ(28), ಇನಾಯತುಲ್ಲಾ(24), ರಾಜು(20), ಮುಸ್ತಫಾ(22), ಶ್ರೀಕಾಂತ್(30), ಮೊಹಮ್ಮದ್ ರಸೂಲ್(35), ಬಾಬು(38), ವೆಂಕಟೇಶ್(38), ಮುಬಾಶಿರ್(25) ಬಂಧಿತ ಕಾಂಗ್ರೆಸ್ ಕಾರ್ಯಕರ್ತರು.
ಮೂವರು ಅಂಗರಕ್ಷಕರು ವಶಕ್ಕೆ
ಗಲಾಟೆಯಲ್ಲಿ ಕೈ ಕಾರ್ಯಕರ್ತ ರಾಜಶೇಖರ್ ಪ್ರಾಣಬಿಟ್ಟಿದ್ದ. ಈತನ ಬೆನ್ನು ಹೊಕ್ಕಿದ್ದ 12 MM ಬುಲೆಟ್ ಯಾರ ಗನ್ನಿಂದ ಬಂದಿದ್ದು ಎನ್ನುವುದು ನಿಗೂಢವಾಗಿಯೇ ಉಳಿದಿತ್ತು. ಆದ್ರೆ, ಇದೀಗ ರಾಜಶೇಖರನ ಜೀವ ಬಲಿ ಪಡೆದಿದ್ದು ಸತೀಶ್ ರೆಡ್ಡಿಯ ಅಂಗರಕ್ಷಕ ಗುರುಚರಣ್ ಸಿಂಗ್ನನದ್ದು ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಗುರುಚರಣ್ ಸಿಂಗ್ನನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸತೀಶ್ ರೆಡ್ಡಿಯ ಇನ್ನುಳಿದ ಇಬ್ಬರು ಖಾಸಗಿ ಅಂಗರಕ್ಷಕರು, ಬಲ್ಜಿತ್ ಸಿಂಗ್, ಗುರುಚರಣ್ ಸಿಂಗ್ ವಶಕ್ಕೆ ಪಡೆದುಕೊಳ್ಳಲಾಗಿದೆ.

