ಪೂರ್ವ ಮುಂಗಾರಿನ ಆರ್ಭಟಕ್ಕೆ ಬೇಲೂರು ಯಗಚಿ ಡ್ಯಾಂ ಭರ್ತಿ

ಹೊಸದಿಗಂತ ವರದಿ, ಹಾಸನ :

ಬೇಲೂರು ತಾಲ್ಲೂಕಿನ, ಚಿಕ್ಕಬ್ಯಾಡಗೆರೆ ಗ್ರಾಮದಲ್ಲಿರುವ ಯಗಚಿ ಜಲಾಶಯ ಪೂರ್ವ ಮುಂಗಾರಿನ ಆರ್ಭಟಕ್ಕೆ ಭರ್ತಿಯಾಗಿದೆ.

ಬೇಲೂರು ಯಗಚಿ ಜಲಾಶಯ 3.60 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಜಲಾಶಯಕ್ಕೆ ಚಿಕ್ಕಮಗಳೂರು ಹಾಗೂ ಬೇಲೂರು ಭಾಗದಲ್ಲಿ ನಿರಂತರ ಮಳೆಯಿಂದ ಒಳ ಹರಿವು ಹೆಚ್ಚಾಗಿದ್ದು ಭರ್ತಿಯಾಗಿದೆ. ಡ್ಯಾಂನಿಂದ 500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.

ಯಗಚಿ ಜಲಾಶಯದ ಗರಿಷ್ಠ ಮಟ್ಟ 3.162.92 ಅಡಿ ಇದ್ದು, ಯಗಚಿ ಜಲಾಶಯಕ್ಕೆ ಹರಿದು ಬರುತ್ತಿರುವ 485 ಕ್ಯೂಸೆಕ್ ನೀರಿಂದ ಇಂದಿನ ನೀರಿನ ಮಟ್ಟ 3.160. 10 ಅಡಿಯಷ್ಟು ಭರ್ತಿಯಾಗಿದೆ. ಜಲಾಶಯಕ್ಕೆ ಸ್ಥಳೀಯ ಶಾಸಕ ಎಚ್.ಕೆ.ಸುರೇಶ್ ಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!