ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮಾಜಿ ಸಚಿವ ಯಾಕೂಬ್ ಖುರೇಷಿಯ ಅಕ್ರಮ ಚರ ಮತ್ತು ಸ್ಥಿರ ಆಸ್ತಿಯನ್ನು ಮೀರತ್ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಕುರಿತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಮಾತನಾಡಿದ್ದು, , ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಅನ್ವಯ ಮಾಜಿ ಸಚಿವ ಯಾಕೂಬ್ ಖುರೇಷಿ ಅವರ ಬೇನಾಮಿ ಆಸ್ತಿ 31 ಕೋಟಿ 77 ಸಾವಿರದ 200 ರೂ.ವಶಪಡಿಸಿಕೊಳ್ಳಲಾಗಿದೆ.
ಖುರೇಷಿ ಈ ಆಸ್ತಿಯನ್ನು ತಮ್ಮ ಕುಟುಂಬ ಸದಸ್ಯರು ಮತ್ತು ಉದ್ಯೋಗಿಗಳ ಹೆಸರಿನಲ್ಲಿ ಖರೀದಿಸಿದ್ದರು. ಇದರಲ್ಲಿ ಆಸ್ಪತ್ರೆ, ಎರಡು ಐಷಾರಾಮಿ ಕಾರುಗಳು, ಪ್ಲಾಟ್ಗಳು ಮತ್ತು ಖುರೇಷಿಯ ಇತರ ಆಸ್ತಿಗಳೂ ಸೇರಿವೆ.
ಒಟ್ಟು ಆಸ್ತಿಯಲ್ಲಿ ನೌಚಂಡಿಯ ಭವಾನಿ ನಗರದಲ್ಲಿ ಆಸ್ಪತ್ರೆ ಕಟ್ಟಡ, ಶಾಸ್ತ್ರಿನಗರದಲ್ಲಿ 3265.35 ಚದರ ಮೀಟರ್, 288 ಚದರ ಮೀಟರ್ ಮತ್ತು 213.60 ಚದರ ಮೀಟರ್ ಅಳತೆಯ ಜಮೀನು ಖುರೇಷಿ ತನ್ನ ಸಂಬಂಧಿಕರ ಹೆಸರಿನಲ್ಲಿ ಖರೀದಿಸಿದ ಮತ್ತು ಎರಡು ಐಷಾರಾಮಿ ಕಾರುಗಳನ್ನು ಒಳಗೊಂಡಿದೆ.
ಮಾರ್ಚ್ 31, 2022 ರಂದು, ಮೀರತ್ನಲ್ಲಿರುವ ಯಾಕೂಬ್ ಖುರೇಷಿಯ ಮಾಂಸ ಕಾರ್ಖಾನೆಯ ಮೇಲೆ ಪೊಲೀಸರು ದಾಳಿ ನಡೆಸಿದರು.ಅಕ್ರಮವಾಗಿ ತಂದ ಮಾಂಸವನ್ನು ಪ್ಯಾಕಿಂಗ್ ಮಾಡಿದ ಪ್ರಕರಣವನ್ನು ಬೇದಿಸಿದ್ದರು. ಈ ಸಂದರ್ಭ ಪೊಲೀಸರು ಕಾರ್ಖಾನೆಯ 10 ಉದ್ಯೋಗಿಗಳನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಖುರೇಷಿ, ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿದಂತೆ 17 ಮಂದಿಯನ್ನು ಹೆಸರಿಸಲಾಗಿದೆ. ಡಿಸೆಂಬರ್ 2022 ರಲ್ಲಿ, ಖುರೇಷಿ, ಅವರ ಪತ್ನಿ ಶಮ್ಜಿದಾ ಬೇಗಂ, ಮಕ್ಕಳಾದ ಫಿರೋಜ್ ಮತ್ತು ಇಮ್ರಾನ್ ಜೊತೆಗೆ ಕಾರ್ಖಾನೆಯ ವ್ಯವಸ್ಥಾಪಕರಾದ ಮೋಹಿತ್ ತ್ಯಾಗಿ, ಮುಜೀಬ್ ಮತ್ತು ಫೈಜ್ಯಾಬ್ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.