ಚಳಿಗಾಲದ ಮಾರುಕಟ್ಟೆಯಲ್ಲಿ ಕಾಣಸಿಗುವ ವಿಶಿಷ್ಟ ಹಣ್ಣುಗಳಲ್ಲಿ ನಕ್ಷತ್ರ ಹಣ್ಣು ಪ್ರಮುಖವಾದುದು. ಇದನ್ನು ಧಾರೆಹುಳಿ, ಕರಂಬಳ, ಕಮರದ್ರಾಕ್ಷಿ ಮತ್ತು ವೈಜ್ಞಾನಿಕವಾಗಿ ಅವೆರೋ ಕ್ಯಾರಂಬೋಲ ಎಂದೂ ಕರೆಯಲಾಗುತ್ತದೆ. ರುಚಿಯ ಜೊತೆಗೆ ಇದು ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿಯಾಗಿದೆ. ಪೌಷ್ಟಿಕತಜ್ಞರ ಪ್ರಕಾರ, ಈ ಹಣ್ಣು ಕಡಿಮೆ ಕ್ಯಾಲೊರಿ ಮತ್ತು ಅಧಿಕ ಫೈಬರ್ ಅನ್ನು ಹೊಂದಿದೆ.
ಈ ನಕ್ಷತ್ರ ಹಣ್ಣು ನಿಮ್ಮ ಆರೋಗ್ಯಕ್ಕೆ ಹೇಗೆಲ್ಲಾ ವರದಾನವಾಗಬಲ್ಲದು:
ತೂಕ ಇಳಿಕೆಗೆ ಸಹಕಾರಿ, ಚಯಾಪಚಯಕ್ಕೆ ಬಲ!
ಸ್ಟಾರ್ ಫ್ರೂಟ್‌ನಲ್ಲಿರುವ ವಿಟಮಿನ್ ಬಿ6 ಅಂಶವು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಕ್ಯಾಲೊರಿಗಳು ಬೇಗನೆ ಕರಗಿ, ದೇಹದ ಕೊಬ್ಬಿನಾಂಶ ಕಡಿಮೆಯಾಗಲು ಸಹಾಯ ಮಾಡುತ್ತದೆ. ತೂಕ ಇಳಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ರೋಗ ನಿರೋಧಕ ಶಕ್ತಿಯ ಬಲವರ್ಧಕ
ಈ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿದ್ದು, ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಋತುಮಾನದ ಕಾಯಿಲೆಗಳನ್ನು ನಿವಾರಿಸಲು ಸಹಾಯ ಮಾಡುವುದಲ್ಲದೆ, ನೆಗಡಿ, ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳಿಂದ ಶೀಘ್ರ ಪರಿಹಾರ ನೀಡುತ್ತದೆ. ಜೊತೆಗೆ, ವಿಟಮಿನ್ ಸಿ ಅಂಶವು ಚರ್ಮದ ಆರೋಗ್ಯವನ್ನು ಕಾಪಾಡಿ, ಚರ್ಮವು ಒಡೆಯುವುದನ್ನು ತಡೆಯುತ್ತದೆ.
ಜೀರ್ಣಾಂಗ ವ್ಯವಸ್ಥೆಗೆ ಟಾನಿಕ್
ಸುಮಾರು 100 ಗ್ರಾಂ ಸ್ಟಾರ್ ಫ್ರೂಟ್‌ನಲ್ಲಿ 2.8 ಗ್ರಾಂ ಫೈಬರ್ ಅಂಶ ಇರುತ್ತದೆ. ಈ ಫೈಬರ್ ಅಂಶವು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಗ್ಯಾಸ್ಟ್ರಿಕ್ ಮತ್ತು ಆಮ್ಲೀಯತೆಯ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಕಾರಿ.
ಕಣ್ಣಿನ ಆರೋಗ್ಯ ಮತ್ತು ದೃಷ್ಟಿ ಸುಧಾರಣೆಗೆ ಔಷಧಿ
ಸ್ಟಾರ್‌ಫ್ರೂಟ್ ವಿಟಮಿನ್ ಎ ಯಲ್ಲಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ ಮತ್ತು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಈ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣಿನ ಪೊರೆ ಬರುವುದನ್ನು ತಡೆಯಬಹುದು.
ನರಮಂಡಲ ಮತ್ತು ಮೆದುಳಿನ ಕಾರ್ಯ ಸುಧಾರಣೆ
ಸ್ಟಾರ್ ಫ್ರೂಟ್‌ನಲ್ಲಿರುವ ವಿಟಮಿನ್ ಬಿ6 ಅಂಶವು ಮೆದುಳಿನ ಕಾರ್ಯವನ್ನು ಹೆಚ್ಚಿಸಿ, ಅದನ್ನು ಆರೋಗ್ಯವಾಗಿಡಲು ನೆರವಾಗುತ್ತದೆ. ಇದರ ಸೇವನೆಯು ನರಮಂಡಲವನ್ನು ಸುಧಾರಿಸಿ, ನರಗಳ ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ. ಇದು ಕುತ್ತಿಗೆ ಮತ್ತು ಭುಜದ ನೋವುಗಳಿಗೆ ಪರಿಹಾರ ನೀಡಲು ಸಹಾಯಕವಾಗಿದೆ.

