April 12, 2026
Sunday, April 12, 2026
spot_img

ವಾಂಖೆಡೆಯಲ್ಲಿ ಅಬ್ಬರಿಸಿದ ಬೆಂಗಳೂರು ಬಾಯ್ಸ್: ಮುಂಬೈ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಆರ್​ಸಿಬಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ವಾಂಖೆಡೆ ಕ್ರೀಡಾಂಗಣದಲ್ಲಿ ಫಿಲ್ ಸಾಲ್ಟ್, ಕೊಹ್ಲಿ, ರಜತ್ ಪಾಟೀದಾರ್ ಬ್ಯಾಟಿಂಗ್ ಅಬ್ಬರಕ್ಕೆ ಮುಂಬೈ ಬೌಲರ್ಸ್ ಗಳು ಸುಸ್ತಾಗಿದ್ದು, ಆರ್​ಸಿಬಿ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 240 ರನ್​ಗಳಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ ಪರ ಫಿಲ್ ಸಾಲ್ಟ್, ಕೊಹ್ಲಿ 120 ರನ್​ಗಳ ಭರ್ಜರಿ ಜೊತೆಯಾಟ ನೀಡಿದರು. ಫಿಲ್ ಸಾಲ್ಟ್ ಇಂದು 36 ಎಸೆತಗಳಲ್ಲಿ 78 ರನ್​ಗಳಿಸಿದರು.

ಸಾಲ್ಟ್ ಔಟಾದ ಬಳಿಕ ಬಂದ ನಾಯಕ ರಜತ್ ಪಾಟೀದಾರ್ ಕೊಹ್ಲಿ ಜೊತೆಗೂಡಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು, 2ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 23 ಎಸೆತಗಳಲ್ಲಿ 65 ರನ್​ಗಳ ಜೊತೆಯಾಟ ನಡೆಸಿದರು.

ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 50 ರನ್​ಗಳಿಸಿ ಸೂರ್ಯಕುಮಾರ್ ಯಾದವ್​ಗೆ ಕ್ಯಾಚ್ ನೀಡಿ ಔಟ್ ಆದರು. ಕೊಹ್ಲಿ ಬೆನ್ನಲ್ಲೇ ಪಾಟೀದಾರ್ ಕೂಡ 20 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್​ಗಳ ಸಹಿತ 53 ರನ್​ಗಳಿಸಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿದರು.

ಬಳಿಕ ಟಿಮ್ ಡೇವಿಡ್ ಕೊನೆಯ 4 ಓವರ್​ಗಳಲ್ಲಿ ಅಬ್ಬರಿದ್ದು,16 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ಗಳ ಸಹಿತ ಅಜೇಯ 34 ರನ್​ಗಳಿಸಿದರು. ಈ ಮೂಲಕ ಮುಂಬೈ ಗೆಲುವಿಗೆ ಬೃಹತ್ ಟಾರ್ಗೆಟ್ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !