May 8, 2026
Friday, May 8, 2026
spot_img

MI vs RCB | ‘ಪಾಟಿದಾರ್’ ಫಟಾ ಫಟ್ ಬ್ಯಾಟಿಂಗ್: ಅತೀ ವೇಗದ ಹಾಫ್ ಸೆಂಚುರಿ ಜಸ್ಟ್ ಮಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಆರಂಭಿಕ ಆಟಗಾರ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡ ತಕ್ಷಣ ಕ್ರೀಸ್‌ಗೆ ಬಂದ ಪಾಟಿದಾರ್, ಮೊದಲ ಚೆಂಡಿನಿಂದಲೇ ಮುಂಬೈ ಇಂಡಿಯನ್ಸ್ ಬೌಲರ್‌ಗಳ ಮೇಲೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

ಮುಂಬೈ ಬೌಲಿಂಗ್ ದಾಳಿಯ ವಿರುದ್ಧ ಯಾವುದೇ ಒತ್ತಡವಿಲ್ಲದಂತೆ ಬ್ಯಾಟ್ ಬೀಸಿದ ರಜತ್, ಕೇವಲ 11 ಎಸೆತಗಳಲ್ಲಿ 44 ರನ್ ಕಲೆಹಾಕಿ ಪಂದ್ಯಕ್ಕೆ ಹೊಸ ಚೈತನ್ಯ ತುಂಬಿದರು. ಅವರ ಬ್ಯಾಟಿಂಗ್‌ನಲ್ಲಿ ಆಕ್ರಮಣಶೀಲತೆ ಸ್ಪಷ್ಟವಾಗಿದ್ದು, ಐದು ಭರ್ಜರಿ ಸಿಕ್ಸರ್‌ಗಳು ಹಾಗೂ ಮೂರು ಮನಮೋಹಕ ಬೌಂಡರಿಗಳು ಸೇರಿ ಕೇವಲ 8 ಎಸೆತಗಳಲ್ಲಿ 42 ರನ್‌ಗಳು ಬಂದವು. ಪ್ರತಿ ಓವರ್‌ನಲ್ಲೂ ರನ್‌ರೇಟನ್ನು ಏರಿಸುತ್ತಾ ಆರ್‌ಸಿಬಿಗೆ ಬಲಿಷ್ಠ ವೇದಿಕೆ ಸಿದ್ಧಪಡಿಸಿದರು.

ಇದನ್ನೂ ಓದಿ:

ಅವರು ಮುಂದಿನ ಚೆಂಡಿನಲ್ಲಿ ಸಿಕ್ಸರ್ ಸಿಡಿಸಿದ್ದರೆ ಐಪಿಎಲ್ ಇತಿಹಾಸದ ವೇಗವಾದ ಅರ್ಧಶತಕದ ದಾಖಲೆಯನ್ನು ಬರೆಯುವ ಸಾಧ್ಯತೆ ಇತ್ತು. ಆದರೆ ಟ್ರೆಂಟ್ ಬೌಲ್ಟ್ ಅದಕ್ಕೆ ಅಡ್ಡಿಯಾದರು. ಆದರೂ ರಜತ್ ತಮ್ಮ ಸಿಡಿಲಾಟವನ್ನು ಮುಂದುವರಿಸಿ ಕೇವಲ 20 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್​ಗಳ ಸಹಿತ 53 ರನ್​ಗಳಿಸಿದರು. ಮಿಚೆಲ್ ಸ್ಯಾಂಟ್ನರ್ ಎಸೆತವನ್ನು ಬೌಂಡರಿಗೆ ಅಪ್ಪಳಿಸುವ ಮೂಲಕ ಅರ್ಧಶತಕದ ಮೈಲಿಗಲ್ಲು ತಲುಪಿದರು.

ಈ ಸ್ಫೋಟಕ ಇನ್ನಿಂಗ್ಸ್ ಆರ್‌ಸಿಬಿ ಶಿಬಿರದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ್ದು, ಮುಂಬೈ ವಿರುದ್ಧದ ಮಹತ್ವದ ಪಂದ್ಯದಲ್ಲಿ ತಂಡಕ್ಕೆ ದೊಡ್ಡ ಬಲ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !