ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನ್ 27ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ ಪ್ರೆಸ್ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿದೆ.
ನಿನ್ನೆ ವಂದೇ ಭಾರತ ಎಕ್ಸ್ ಪ್ರೆಸ್ ರೈಲಿನ ದರ ಹೆಚ್ಚಳವಾಗಿತ್ತು ಎಂದು ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ನೈಋತ್ಯ ರೈಲ್ವೆ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಟಿಕೆಟ್ ದರವನ್ನು ಪರಿಷ್ಕರಣೆ ಮಾಡಿದೆ.
ಎಕ್ಸಿಕುಟಿವ್ ಕ್ಲಾಸ್ ನ ಟಿಕೆಟ್ ದರ ಹೆಚ್ಚಿದ್ದು ಎಸಿ ಕಾರ್ ಚೇರ್ ಟಿಕೆಟ್ ದರವನ್ನು ಇಳಿಸಲಾಗಿದೆ. ಪ್ರತಿ ನಿಲ್ದಾಣಗಳ ನಡುವಿನ ಪ್ರಯಾಣ ದರವನ್ನು 20. ರೂ ಹೆಚ್ಚಿಸಲಾಗಿದೆ.
ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಇದ್ದ 410 ರೂ. ಟಿಕೆಟ್ ದರ ಈಗ 365 ರೂ. ಗೆ ಇಳಿಸಲಾಗಿದೆ. ಅದೇ ರೀತಿ ಧಾರವಾಡದಿಂದ ಹುಬ್ಬಳ್ಳಿ ರೈಲು ನಿಲ್ದಾಣದವರೆಗಿನ ಟಿಕೆಟ್ ದರವನ್ನು ಇಳಿಸಲಾಗಿದೆ. ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ ಇದೇ ನಿಲ್ದಾಣಗಳ ನಡುವೆ ಸಂಚರಿಸಲು ಈ ಮೊದಲು ನಿಗದಿ ಮಾಡಿದ್ದ 545 ರೂ. ಬದಲು 690 ರೂಗೆ ಹೆಚ್ಚಿಸಲಾಗಿದೆ.
ಪರಿಷ್ಕೃತ ಟಿಕೆಟ್ ದರ:
ಬೆಂಗಳೂರು-ಧಾರವಾಡ – 1185 ರೂ,
ಬೆಂಗಳೂರು-ಹುಬ್ಬಳ್ಳಿ 1155 ರೂ,
ಬೆಂಗಳೂರು-ದಾವಣಗೆರೆ 920 ರೂ.
ಯಶವಂತಪುರ-ಹುಬ್ಬಳ್ಳಿ 1155 ರೂ.
ಯಶವಂತಪುರ-ಧಾರವಾಡ 1185 ರೂ,
ದಾವಣಗೆರೆ-ಧಾರವಾಡ 555 ರೂ,
ದಾವಣಗೆರೆ-ಹುಬ್ಬಳ್ಳಿ 520 ರೂ,
ಹುಬ್ಬಳ್ಳಿ-ಧಾರವಾಡ 365 ರೂ.