ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಹಾಳಾದ ರಸ್ತೆ, ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಿಂದ ಬೇಸತ್ತಿದ್ದೇವೆ, ಹೀಗಾಗಿ ಬೆಂಗಳೂರಿನ ಬ್ಲ್ಯಾಕ್‌ಬಕ್ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡ್ತಿದ್ದೇವೆ ಎಂದು BlackBuck ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಹೇಳಿದ್ದರು.
ಬಹುಕೋಟಿ ಕಂಪನಿ ಬೆಂಗಳೂರಿನಲ್ಲೇ ಇರಲಿ ಅವರ ಮನವೊಲಿಸಿ ಎಂದು ಸರ್ಕಾರಕ್ಕೆ ಬಹಳಷ್ಟು ಉದ್ಯಮಿಗಳು ಮನವಿ ಮಾಡಿದ್ದರು. ಈ ಬಗ್ಗೆ ಡಿಸಿಎಂ ಡಿ. ಕೆ ಶಿವಕುಮಾರ್ ಮಾತನಾಡಿದ್ದಾರೆ. ಹೋಗುವವರು ಹೋಗಲಿ, ಅವರನ್ನು ತಡೆಯೋದಿಲ್ಲ. ಆದರೆ ನಮ್ಮ ಸರ್ಕಾರಕ್ಕೆ ಬೆದರಿಕೆ ಹಾಕೋಕೆ ಬರಬೇಡಿ ಎಂದಿದ್ದಾರೆ.
ಈ ಮಾತಿಗೆ ಹೆದರಿದ ಸಿಇಒ ರಾಜೇಶ್ ಬೆಂಗಳೂರು ನಮ್ಮ ಮನೆ ಅಷ್ಟೆ. ನಾವು ಬೇರೆ ಏರಿಯಾಗೆ ಹೋಗ್ತೀವಿ ಎಂದು ಹೇಳಿಕೊಂಡಿದ್ದಾರೆ.
ಕಳೆದ ದಶಕದಲ್ಲಿ ಕರ್ನಾಟಕ ತಂತ್ರಜ್ಞಾನ-ಪರಿಸರ ವ್ಯವಸ್ಥೆಯ ಅತಿದೊಡ್ಡ ಫಲಾನುಭವಿಗಳಲ್ಲಿ ಒಂದಾಗಿ, ಬೆಂಗಳೂರು ನಗರವು ಎಲ್ಲವನ್ನೂ ಸಾಧಿಸಲು ಸಹಾಯ ಮಾಡಿದೆ. ಮುಂದೆ ನಮ್ಮ ಸಾಮರ್ಥ್ಯವನ್ನು ಅನ್ಲಾಕ್ ಮಾಡುವಲ್ಲಿ ಅದು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಕಂಪನಿಯು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ ಎಂದು ಗಮನಿಸಿದರು. ಆದ್ದರಿಂದ, ನಾವು ನಗರದಿಂದ ಹೊರಗೆ ಸ್ಥಳಾಂತರಗೊಳ್ಳುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಕೆಲವು ಮಾಧ್ಯಮಗಳು ಮಾಡಿರುವ ಹೇಳಿಕೆಗಳನ್ನು ನಾವು ಏಕಪಕ್ಷೀಯವಾಗಿ ನಿರಾಕರಿಸುತ್ತೇವೆ. ನಾವು ನಗರದೊಳಗೆ ಬೇರೆ ಸ್ಥಳಕ್ಕೆ ಮಾತ್ರ ಸ್ಥಳಾಂತರಗೊಳ್ಳುತ್ತಿದ್ದೇವೆ. ಇದು ನಮ್ಮ ಉದ್ಯೋಗಿಗಳಿಗೆ ಸುಲಭ ಪ್ರಯಾಣಕ್ಕೆ ಅನುಕೂಲವಾಗುತ್ತದೆ ಎಂದು ಯಬಾಜಿ ಹೇಳಿದರು.
ನಾವು ಬೆಂಗಳೂರು ನಗರದಲ್ಲಿಯೇ ಮುಂದುವರಿಸುವುದಲ್ಲದೆ, ನಮ್ಮ ಹೆಜ್ಜೆಗುರುತನ್ನು ಇಲ್ಲಿ ವಿಸ್ತರಿಸುತ್ತೇವೆ ಎಂದು ಯಬಾಜಿ ಹೇಳಿದರು. ಬೆಂಗಳೂರು ನಮಗೆ ತವರಾಗಿದೆ. ನಮ್ಮ ಅಗತ್ಯತೆಗಳು ಮತ್ತು ಸಮಸ್ಯೆಗಳನ್ನು ಸಂಬಂಧಿತ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿ ಅವುಗಳನ್ನು ಪರಿಹರಿಸಲು ಬೆಂಬಲವನ್ನು ಪಡೆಯಲು ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಬೆಂಗಳೂರು ನಮ್ಮ ಮನೆ, ಬೇರೆ ಏರಿಯಾಗೆ ಹೋಗ್ತಿದಿವಷ್ಟೆ: ಬ್ಲ್ಯಾಕ್‌ಬಕ್ ಸಿಇಒ
