September 13, 2026
Sunday, September 13, 2026
spot_img

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ | ತಾಳ್ಮೆಯ ತೀರ್ಮಾನಕ್ಕೆ ಸಿಕ್ಕ ಫಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಂಕ ವಿಚಾರದಲ್ಲಿ ಎದುರಾದ ಟೀಕೆಗಳಿಗೆ ಪ್ರತಿಕ್ರಿಯಿಸದೆ ತಾಳ್ಮೆಯಿಂದ ಮುಂದುವರಿದ ಪರಿಣಾಮ ಈಗ ದೇಶಕ್ಕೆ ಲಾಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಸದನ ಆರಂಭಕ್ಕೂ ಮುನ್ನ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ದಿನಗಳಲ್ಲಿ ಸುಂಕ ನೀತಿಗಳ ಕುರಿತು ಸಾಕಷ್ಟು ಟೀಕೆಗಳು ಬಂದಿದ್ದವು. ಆದರೆ ಅವುಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಬದಲು ತಾಳ್ಮೆ ವಹಿಸಿದ ಪರಿಣಾಮ ಇಂದು ಸಕಾರಾತ್ಮಕ ಫಲಿತಾಂಶ ಕಾಣುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:

ಭಾರತ–ಯುಎಸ್ ವ್ಯಾಪಾರ ಒಪ್ಪಂದವು ದೇಶದ ಆರ್ಥಿಕತೆಗೆ ಅನುಕೂಲಕರ ವಾತಾವರಣವನ್ನು ರೂಪಿಸಿದ್ದು, ಹೂಡಿಕೆ ಮತ್ತು ವ್ಯಾಪಾರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದರು. ವಿಶ್ವದ ಚಿಂತನೆಗಳಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ ಎಂದು ಹೇಳಿದ ಮೋದಿ, ಜಾಗತಿಕ ವೇದಿಕೆಗಳಲ್ಲಿ ಭಾರತದ ಪಾತ್ರ ದಿನೇದಿನೇ ಬಲವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಹಲವು ದೇಶಗಳಲ್ಲಿ ವ್ಯಾಪಾರ ಉದ್ವಿಗ್ನತೆಗಳು ಹೆಚ್ಚಾಗಿದ್ದರೂ, ಭಾರತವು ಅವುಗಳಿಂದ ಲಾಭ ಪಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !