ರಾಜ್ಯದಲ್ಲಿ ಕೋವಿಡ್ 2ನೇ ಡೋಸ್ ಲಸಿಕೆಯ 100% ಗುರಿ ಮುಟ್ಟಿದ ಮೊದಲ ಜಿಲ್ಲೆ ಬೆಂಗಳೂರು ಗ್ರಾಮಾಂತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಕೊರೋನಾ ವಿರುದ್ಧ ಲಸಿಕೆ ವಿತರಣೆ ಅಭಿಯಾನ ಯಶಸ್ಸಿಯಾಗಿ ಸುಗುಟ್ಟಿದ್ದು, ಈಗಾಗಲೇ ಹಲವು ಜಿಲ್ಲೆಗಳು ಮೊದಲ ಡೋಸ್ ಲಸಿಕೆಯನ್ನುಶೇ.100ರಷ್ಟು ಪ್ರಗತಿ ಸಾಧಿಸಿವೆ.
ಇದರ ಬೆನ್ನಲ್ಲೇ 2ನೇ ಡೋಸ್ ಕೊರೋನಾ ಲಸಿಕೆಯನ್ನುಶೇ.100ರಷ್ಟು ಜನರಿಗೆ ನೀಡಿದ ಗುರಿಯನ್ನು ಕೂಡ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಾಧಿಸಿದೆ. ಈ ಮೂಲಕ ರಾಜ್ಯದಲ್ಲಿ ಪ್ರಥಮ ಜಿಲ್ಲೆಯಾಗಿ ಹೊರಹೊಮ್ಮಿದೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕದಲ್ಲೇ ಮೊಟ್ಟಮೊದಲ 2ನೇ ಡೋಸ್ ಲಸಿಕೆ ಶೇ.100ರಷ್ಟು ಗುರಿ ಸಾಧಿಸಿದ ಜಿಲ್ಲೆಯಾಗಿರೋದಾಗಿ ತಿಳಿಸಿದ್ದಾರೆ.
ಇನ್ನು 11 ಜಿಲ್ಲೆಗಳು ಶೇ.90ಕ್ಕೂ ಹೆಚ್ಚು 2ನೇ ಡೋಸ್ ಲಸಿಕೆಯ ಗುರಿಯನ್ನು ತಲುಪಿವೆ. ಈ ಯಶಸ್ಸಿಗೆ ಹಗಲು ರಾತ್ರಿ ಕೆಲಸ ಮಾಡಿದ ಎಲ್ಲಾ ಆರೋಗ್ಯ ಕಾರ್ಯಕರ್ತರು, ಜಿಲ್ಲಾಡಳಿತಕ್ಕೆ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!