ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಕಿನ ಕಿರಣಗಳಲ್ಲಿ ನಮ್ಮ ದೇಶ ಅದ್ಭುತವಾಗಿ ಕಾಣುತ್ತದೆ, ಬೆಂಗ್ಳೂರು, ಪುಣೆ ಮಿನುಗುತ್ತವೆ ಎಂದು ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ ಎಂಬ ವಿಡಿಯೋವೊಂದನ್ನು ಗಗನಯಾನಿ ಶುಭಾಂಶು ಶುಕ್ಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆಳಕಿನ ಚಿತ್ತಾರದಲ್ಲಿ ಭಾರತ ಕಂಡ ಬಗೆಯನ್ನು ಶುಭಾಂಶು ಶುಕ್ಲಾ ಹಂಚಿಕೊಂಡಿದ್ದಾರೆ. ಭಾರತವು ನೈರುತ್ಯದಿಂದ ಈಶಾನ್ಯಕ್ಕೆ ಒಂದು ನಕ್ಷತ್ರ ಪುಂಜದಂತೆ ಗೋಚರಿಸುತ್ತದೆ. ಬೆಂಗಳೂರು, ಹೈದ್ರಾಬಾದ್, ಪುಣೆ ನಗರಗಳು ಆ ಪುಂಜದ ನಕ್ಷತ್ರಗಳು ಎಂದು ಬಣ್ಣಿಸಿದ್ದಾರೆ
ಬೆಳಕಲ್ಲಿ ಬೆಂಗಳೂರು ಅದ್ಭುತವಾಗಿ ಕಾಣುತ್ತದೆ: ಬಾಹ್ಯಾಕಾಶದಿಂದ ಭಾರತ ಕಂಡ ಬಗೆ ಹಂಚಿಕೊಂಡ ಶುಕ್ಲಾ

