ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (NH 275) ವಾಹನ ಸಂಚಾರಕ್ಕೆ ಮುಕ್ತವಾದ ನಂತರ ಕಳೆದ 3 ವರ್ಷಗಳಲ್ಲಿ, 855.79 ಕೋಟಿ ರೂಪಾಯಿಗಳಷ್ಟು ಟೋಲ್ ಸಂಗ್ರಹವಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಮಿಸಿದ 118 ಕಿ.ಮೀ ಉದ್ದದ ಹೆದ್ದಾರಿಯನ್ನು ಮಾರ್ಚ್ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಮಾರ್ಗವು ಬೆಂಗಳೂರಿನ ಕುಂಬಳಗೋಡಿನಲ್ಲಿ ಪ್ರಾರಂಭವಾಗಿ ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ, ಮಂಡ್ಯ ಜಿಲ್ಲೆಯಲ್ಲಿ 58 ಕಿ.ಮೀ ಮತ್ತು ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ ಮೂಲಕ ಹಾದುಹೋಗುತ್ತದೆ.
ಹೆದ್ದಾರಿಯಲ್ಲಿ ಮೂರು ಟೋಲ್ ಪ್ಲಾಜಾಗಳಿವೆ. 2022-23 ಮತ್ತು 2025-26 ರ ನಡುವೆ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಿಮಿಣಿಕೆ ಟೋಲ್ ಪ್ಲಾಜಾದಲ್ಲಿ 282.14 ಕೋಟಿ ರೂಪಾಯಿ, ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ 248.42 ಕೋಟಿ ರೂ. ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್ ಪ್ಲಾಜಾದಲ್ಲಿ 325.23 ಕೋಟಿ ರೂ. ಸಂಗ್ರಹವಾಗಿದೆ.

