ದಿನಭವಿಷ್ಯ
ಮೇಷ
ಕೆಲಸ ಮಾಡಲು ಉದಾಸೀನತೆ, ಜಡತ್ವ ಕಾಡುವುದು. ಕೆಲವರ ವರ್ತನೆಯೂ ಅಸಹನೀಯ ಎನಿಸುವುದು. ಕೌಟುಂಬಿಕ ಸಂಘರ್ಷ.
ವೃಷಭ
ವ್ಯವಹಾರದಲ್ಲಿ ಎಚ್ಚರ ವಹಿಸಿ. ತಪ್ಪುಗಳು ಸಂಭವಿಸಿದರೆ ತಕ್ಷಣ ತಿದ್ದಿಕೊಳ್ಳಿ. ತಪ್ಪನ್ನೆ ಸಮರ್ಥಿಸುವ ಕಾರ್ಯ ಮಾಡದಿರಿ. ಆರ್ಥಿಕ ಕೊರತೆ ಕಾಡುವುದು.
ಮಿಥುನ
ಸಮಸ್ಯೆಯೊಂದರ ಪರಿಹಾರಕ್ಕೆ ಯೋಜಿಸುತ್ತಿದ್ದರೆ ಇಂದು ಸಕಾಲ. ಸೂಕ್ತ ನೆರವೂ ಒದಗುವುದು. ಮನೆಯಲ್ಲಿನ ಬಿಕ್ಕಟ್ಟು ಶಮನ.
ಕಟಕ
ವಾಗ್ವಾದ ಮತ್ತು ಸಂಘರ್ಷವನ್ನು ತಪ್ಪಿಸಿ. ಇದು ನಿಮ್ಮ ಮಾನಸಿಕ ಶಾಂತಿ ಕಾಯ್ದುಕೊಳ್ಳಲು ಅವಶ್ಯ. ಸಣ್ಣ ವಿಷಯಕ್ಕೆ ರೇಗಲು ಹೋಗದಿರಿ. ಸಹನೆ ಕಾದುಕೊಳ್ಳಿ.
ಸಿಂಹ
ನಿಮ್ಮ ಆಸಕ್ತಿಯ ವಿಷಯದಲ್ಲಿ ಹೆಚ್ಚು ತೊಡಗಲು ಅವಕಾಶ ದೊರಕುವುದು. ಆರ್ಥಿಕ ಸಮಸ್ಯೆ ನಿಧಾನಕ್ಕೆ ನಿವಾರಣೆ. ಸಾಂಸಾರಿಕ ನೆಮ್ಮದಿ.
ಕನ್ಯಾ
ಹೊಸ ವ್ಯವಹಾರ ಆರಂಭಿಸಲು ಇದು ಸೂಕ್ತ ಕಾಲವಲ್ಲ. ತುಸು ಕಾಯುವುದು ಒಳಿತು. ಅನುಭವಿಗಳ ಸಲಹೆ ಕೇಳಿ ಮುಂದುವರಿಯಿರಿ.
ತುಲಾ
ನಿಮ್ಮ ಅಹಂಗೆ ಪೆಟ್ಟು ಬೀಳುವ ಸಂಭವವಿದೆ. ಕೆಲವು ವಿಚಾರಗಳಲ್ಲಿ ಹೆಚ್ಚು ಭಾವುಕರಾಗಿ ವರ್ತಿಸುವಿರಿ. ಇದರಿಂದ ಅಕಾರಣವಾಗಿ ನೋವು ತಿನ್ನುವಿರಿ.
ವೃಶ್ಚಿಕ
ನಿಮ್ಮ ಉದ್ದೇಶವೊಂದು ಇಂದು ಈಡೇರುವುದು. ಆರೋಗ್ಯದ ಕಡೆ ಗಮನ ಕೊಡಿ. ನಿರ್ಲಕ್ಷ್ಯ ವಹಿಸದಿರಿ. ಕೌಟುಂಬಿಕ ಭಿನ್ನಮತ ಶಾಂತಿಯುತ ಪರಿಹಾರ.
ಧನು
ಹೃದಯದ ಭಾವನೆಗೆ ಸಂಬಂಸಿದ ವಿಷಯ ತಲ್ಲಣ ತರಬಹುದು. ಆಪ್ತರೊಬ್ಬರು ನಿರಾಶೆ ಉಂಟು ಮಾಡುತ್ತಾರೆ. ವಿವೇಕದಿಂದ ವರ್ತಿಸಲು ಕಲಿಯಿರಿ.
ಮಕರ
ಸಂಬಂಧದ ವಿಚಾರದಲ್ಲಿ ಹೆಚ್ಚು ಸೂಕ್ಷ್ಮವಾಗಿ ವರ್ತಿಸುತ್ತೀರಿ. ಇತರರ ವಿಷಯದಲ್ಲಿ ನಿಮ್ಮ ಅಭಿಪ್ರಾಯ ಹೇರಲು ಹೋಗಬೇಡಿ. ಅದರಿಂದ ಸಂಘರ್ಷ.
ಕುಂಭ
ನಿಮ್ಮ ಜೀವನಶೈಲಿ ಬದಲಿಸಲು ಯೋಜಿಸಿರಿ. ಕೆಲವು ವಿಚಾರಗಳಲ್ಲಿ ಬದಲಾವಣೆ ಅವಶ್ಯ. ಸಹನೆ ಕಾಯ್ದುಕೊಳ್ಳಲು ಆದ್ಯತೆ ಕೊಡಿ.
ಮೀನ
ಕೌಟುಂಬಿಕ ವಿಷಯವೊಂದನ್ನು ಬೇಗ ಇತ್ಯರ್ಥಪಡಿಸಿ. ಅದನ್ನು ದೀರ್ಘ ಕಾಲ ಮುಂದೂಡಬೇಡಿ. ಇತರರ ಸಹಕಾರಕ್ಕೆ ಕಾಯದಿರಿ.