ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯಲ್ಲಿ ಇಂದು ಗದ್ದಲದ ನಡುವೆ ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಉದ್ದೇಶದ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ 2025ವನ್ನು ಮಂಡಿಸಲಾಯಿತು. ಈ ವಿಧೇಯಕಕ್ಕೆ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಅಂಗೀಕಾರ ದೊರೆತಿದೆ.
ಸಚಿವ ಹೆಚ್.ಕೆ ಪಾಟೀಲ್ ಅವರು ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಉದ್ದೇಶದ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ 2025 ವಿಧೇಯಕವನ್ನು ಮಂಡಿಸಿದರು.
ಈ ವಿಧೇಯಕ ಕುರಿತಾಗಿ ಆಡಳಿತ ವಿಪಕ್ಷಗಳ ನಡುವೆ ಜಟಾವಟಿ ನಡೆಯಿತು. ಬಿಜೆಪಿ ಸದಸ್ಯರ ತೀವ್ರ ವಿರೋಧದ ನಡುವೆ ಅರಮನೆ ಭೂ ಬಳಕೆ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.