ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲಕ್ಕೆ ರಾಜಧಾನಿ ಬೆಂಗಳೂರು ರೆಡಿಯಾಗಿದ್ದು, ಜನರ ಸಮಸ್ಯೆ ಆಲಿಸೋಕೆ ಬಿಬಿಎಂಪಿ ಸಹಾಯವಾಣಿ ಆರಂಭ ಮಾಡಿದೆ.
ಸದ್ಯ ಮಳೆಗಾಲದ ಆರಂಭದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದ ಮಳೆರಾಯನಿಂದ ಬೆಂಗಳೂರಿನ ಹಲವು ಏರಿಯಾಗಳ ಜನರು ನೀರು ನುಗ್ಗಿ ಸಂಕಷ್ಟ ಅನುಭವಿಸಿದ್ರು, ಅಲ್ಲದೇ 500 ಕ್ಕೂ ಹೆಚ್ಚು ಮರ-ಗಿಡಗಳು ಧರೆಗುರುಳಿ ಅವಾಂತರ ಸೃಷ್ಟಿಸಿತ್ತು.
ಇದೆಲ್ಲದರಿಂದ ಎಚ್ಚೆತ್ತ ಪಾಲಿಕೆ ಕೆಲ ಮುಂಜಾಗ್ರತ ಕ್ರಮಗಳನ್ನ ಕೈಗೊಂಡಿದೆ. ಈಗಾಗಲೇ ರಾಜಕಾಲುವೆಗಳ ನೀರಿನ ಮಟ್ಟ ಮಾನಿಟರಿಂಗ್ ಗೆ ಟೆಕ್ನಾಲಜಿ ಬಳಸಿರೋ ಪಾಲಿಕೆ, ಮಳೆ ಅವಾಂತರಗಳ ತಡೆಗೆ ಕೆಲ ಕ್ರಮಗಳನ್ನ ಕೈಗೊಂಡಿದೆ. ರಾಜಕಾಲುವೆಗಳ ನೀರಿನ ಮಟ್ಟ ತಿಳಿಯಲು ಕಂಟ್ರೋಲ್ ರೂಂ ಕಾರ್ಯನಿರ್ವಹಣೆ ಮಾಡಲಾಗಿದ್ದು, ರಾಜಕಾಲುವೆಗಳಿಗೆ ಕ್ಯಾಮರಾ, ಸೆನ್ಸಾರ್ ಅಳವಡಿಕೆ ಮಾಡಲಾಗಿದೆ.
ಇನ್ನು ಬೆಂಗಳೂರಿನ ಬಹುತೇಕ ರಾಜಕಾಲುವೆಗಳ ಸ್ವಚ್ಛತೆ ಬಗ್ಗೆ ಗಮನ ಕೊಡಲಾಗಿದ್ದು, ಅಂಡರ್ ಪಾಸ್ ಗಳಲ್ಲಿ ಡೇಂಜರ್ ಲೈನ್ ಗುರ್ತಿಸಿ ಎಚ್ಚರಿಕೆ ನೀಡಲಾಗಿದೆ. ನೀರು ತುಂಬುವ ರಸ್ತೆಗಳು, ಅಂಡರ್ ಪಾಸ್ ಗಳಲ್ಲಿ ನಿಗಾ ಇಡಲಾಗಿದ್ದು, ಮಳೆಗಾಲದ ಸಮಸ್ಯೆಗಳಿಗೆ 1533 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕಿದೆ.
Idi Bengaluranne kereyannagidibitideeri karana rastegaluge dambarilla charandigala hooletillaa Rajakaluvegslalli belediruva hullu gida gente galannu Besigeyalli clean madisillaa vidyuth kambagalu berfi derpagalu kulagetti hogive innu MALEYAKALAVANNU EDURISALU BBMP SAJJU ennuva patrika prakatane Bruhath Bengaluru kelasa madta illaa innu GREATER BENGALURU madtarante__ bere rajyagalu adikolluvudakke margamadikodabedi_ BDA abolish madi_BBMP _BWSSB_ REVENUE_ ilakhegalannuonde soorinadi kelasa nirvahisuvante madi Ella sulalitavagi nedeyutade