ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಈಜಿಪುರ ಫ್ಲೈಓವರ್ ಕಾಮಗಾರಿ ಕಳೆದ 8 ವರ್ಷಗಳಿಂದ ವಿಳಂಬವಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರಲ್ಲಿ ಅಸಹನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕಾಮಗಾರಿ ಮುಗಿಸಿ ಕೊಡುವುದಕ್ಕೆ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈಜಿಪುರ ಫ್ಲೈಓವರ್ ಕಾಮಗಾರಿ 2017ರಲ್ಲಿ ಪ್ರಾರಂಭಗೊಂಡಿದ್ದು, ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಇನ್ನೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ, @BengaluruRains_ ಎಂಬ ಎಕ್ಸ್ ಖಾತೆಯಿಂದ, ‘ಹಲೋ @realDonaldTrump, ದಯವಿಟ್ಟು ಬಿಬಿಎಂಪಿಯೊಂದಿಗೆ ಮಧ್ಯಸ್ಥಿಕೆ ವಹಿಸಿ ಈಜಿಪುರ ಫ್ಲೈಓವರ್ ಕಾಮಗಾರಿ ವೇಗವಾಗಿ ಪೂರ್ಣಗೊಳ್ಳುವಂತೆ ಮಾಡಿ. ನಾವು ಈ ಮೇಲ್ಸೇತುವೆಗೆ ‘ಮೆಗಾ ಟ್ರಂಪ್ ಫ್ಲೈಓವರ್’ ಎಂದು ಹೆಸರಿಡುತ್ತೇವೆ’ ಎಂಬ ಪೋಸ್ಟ್ ಮಾಡಲಾಗಿದೆ.
ಈ ಪೋಸ್ಟ್ ನಂತರ, ‘ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸುವುದು ದೊಡ್ಡ ವಿಷಯವಲ್ಲ. ಟ್ರಂಪ್ ಅವರು ತಮ್ಮ ನೈಪುಣ್ಯವನ್ನು ಸಾಬೀತುಪಡಿಸಲು ಈಜಿಪುರ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸುವಂತೆ ಮಾಡಿ’ ಎಂಬ ಸವಾಲು ಹಾಕಲಾಗಿದೆ. ಈ ಹಾಸ್ಯಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಇನ್ಮುಂದೆ ದೇಶದ ಪ್ರತಿಯೊಂದು ವ್ಯವಹಾರಗಳು ಟ್ರಂಪ್ ನ ಅಣತಿಯಂತೆ ನಡೆಯುವವು,,,,ಇದರ ಹಿಂದೆ ಭಾರತದ ಕೆಲವು ರಾಷ್ಟ್ರೀಯ ಆಪ್ತ ಉದ್ಯಮಿ ಗೆಳೆಯರ ಹಿತಾಸಕ್ತಿ ಸಹ ಕೆಲಸ ಮಾಡಿರಬಹುದು