February 4, 2026
Wednesday, February 4, 2026
spot_img

POWER CUT | ಬೆಂಗಳೂರಿಗರೇ ಗಮನಿಸಿ, ಈ ಏರಿಯಾಗಳಲ್ಲಿ ಫೆ. 6, 7ರಂದು ಕರೆಂಟ್‌ ಇರಲ್ಲ!

ಕೆಪಿಟಿಸಿಎಲ್ ವತಿಯಿಂದ (KPTCL) ತುರ್ತುನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಕಾರಣದಿಂದಾಗಿ ಹಲವು ಏರಿಯಾಗಳಲ್ಲಿ ಫೆ. 6, 7ರಂದು ಕರೆಂಟ್‌ ಇರೋದಿಲ್ಲ.

ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಫೆ6ರಂದು ವಿದ್ಯುತ್‌ ವ್ಯತ್ಯಯವಾಗುವ ನಗರಗಳು..

ವಿನಾಯಕ ನಗರ, ವಿಕಾಸ್ ನಗರ, ಶೋಭಾ ಅಪಾರ್ಟ್‌ಮೆಂಟ್, 8ನೇ ಮೈಲ್ ರಸ್ತೆ, ರಾಮಯ್ಯ ಲೇಔಟ್, ಹಾವನೂರು ಎಕ್ಸ್ಟೆನ್. ನಾರಾಯಣ ಲೇಔಟ್, ವಿಡಿಯಾ ಸ್ಕೂಲ್, ಕುವೆಂಪು ನಗರ, ವಿಡಿಯಾ ಬಸ್ ಸ್ಟಾಪ್, ರಿಲಯನ್ಸ್ ಫ್ರೆಶ್, ಮುನಿಕೊಂಡಪ್ಪ ಲೇಔಟ್, ಅಶೋಕ್ ನಗರ, ವಿದ್ಯಾ ನಗರ, ಡಿಫೆನ್ಸ್ ಕಾಲೋನಿ, ಮಂಜುನಾಥ್ ನಗರ, ಮಹಾಲಕ್ಷ್ಮಿ ನಗರ, ಕಾಟರಾಯ ನಗರ, ಸೋಪ್ ಫ್ಯಾಕ್ಟರಿ ಲೇಔಟ್, ವಿಜಯಲಕ್ಷ್ಮಿ ಲೇಔಟ್, ಅಂದಾನಪ್ಪ ಲೇಔಟ್ , ಬಿಟಿಎಸ್ ಲೇಔಟ್, ಸಿದ್ದೇಶ್ವರ ಲೇಔಟ್, ಸಾಸುವೆಘಟ್ಟ, ಸೋಲದೇವನಹಳ್ಳಿಯ ಭಾಗಶಃ, ತರಬನಹಳ್ಳಿ ಮುಖ್ಯ ರಸ್ತೆ, ಹೆಸರಘಟ್ಟ ಮುಖ್ಯ ರಸ್ತೆ, ಸಿಡೇದಹಳ್ಳಿ, ಭಾಗಶಃ ವಿಶ್ವೇಶರಯ್ಯ ಲೇಔಟ್, ರಾಯಲ್ ಎನ್ಕ್ಲೇವ್, ಬೈರವೇಶ್ವರ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಫೆ. 7ರಂದು ವಿದ್ಯುತ್‌ ವ್ಯತ್ಯಯ ಉಂಟಾಗುವ ಸ್ಥಳಗಳು..

ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ ವಿಜಯನಗರ, ಆರ್‌ಪಿಸಿ ಲೇಔಟ್, ಸರ್ವಿಸ್ ರಸ್ತೆ, ವಿಜಯನಗರ 7ನೇ ಮುಖ್ಯ ರಸ್ತೆಯಿಂದ 13ನೇ ಮುಖ್ಯ ರಸ್ತೆ, ಮೊದಲ ಹಂತ ತಿಮ್ಮೇನಹಳ್ಳಿ, ಎಂಸಿ ಲೇಔಟ್‌ನ ಒಂದು ಭಾಗ, ಬಿನ್ನಿ ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್‌ನ ಒಂದು ಭಾಗ, ಪಿಸಿ ಕೈಗಾರಿಕಾ ಪ್ರದೇಶ, ಕಾವೇರಿಪುರ, ರಂಗನಾಥಪುರ, ಕೆಸಿಜಿ ಕೈಗಾರಿಕಾ ಪ್ರದೇಶ, ನಂಜಪ್ಪ ಕೈಗಾರಿಕಾ ಎಸ್ಟೇಟ್, ಸುನ್ನದಗೋಡು, ಸೆಲ್ವಂ ಕೈಗಾರಿಕಾ ಎಸ್ಟೇಟ್, ಬಲ್ಲಾಯನ ಕೆರೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾವೇರಿಪುರ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, ನಾಗರಭಾವಿ 11ನೇ ಬ್ಲಾಕ್, ಕೆಎಚ್‌ಬಿ ಕಾಲೋನಿ, ಎಚ್‌ವಿಆರ್ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶ, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್ ಕೆಎಚ್‌ಬಿ ಕಾಲೋನಿ, ಕೆಎಚ್‌ಬಿ ಕಾಲೋನಿ, ಮಾಗಡಿ ಮುಖ್ಯ ರಸ್ತೆ, ಅಗ್ರಹಾರ ದಾಸರ ಹಳ್ಳಿಯ ಒಂದು ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !