Bengaluru Stampede Case: ಕಾಲ್ತುಳಿತಕ್ಕೆ ಇವರೆಲ್ಲರು ಹೊಣೆ ಎಂದ ಮೈಕೆಲ್ ಡಿ.ಕುನ್ಹಾ ಆಯೋಗ! ಏನಿದೆ ವರದಿಯಲ್ಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಐತಿಹಾಸಿಕ ಜಯದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ನೇತೃತ್ವದ ಏಕಸದಸ್ಯ ತನಿಖಾ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಈ ತನಿಖಾ ವರದಿ ರಾಜ್ಯದ ಆಡಳಿತ ವ್ಯವಸ್ಥೆಯಾದರೂ ಹೇಗೆ ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

2024ರ ಜೂನ್ 4ರಂದು ನಡೆದ ಈ ಘಟನೆ 11 ಅಭಿಮಾನಿಗಳ ಪ್ರಾಣ ಹಾನಿಗೆ ಕಾರಣವಾಗಿತ್ತು. ನ್ಯಾಯಮೂರ್ತಿ ಕುನ್ಹಾ ಅವರು ಸಲ್ಲಿಸಿದ ವರದಿಯಲ್ಲಿಂದು ಈ ಭೀಕರ ಘಟನೆಗೆ ನಾಲ್ಕು ಪ್ರಮುಖ ಕಾರಣದಾರರನ್ನು ಗುರುತಿಸಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (KSCA), ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಡಿಎನ್‌ಎ (DNA), ಆರ್‌ಸಿಬಿ ಮ್ಯಾನೇಜ್ಮೆಂಟ್ ಹಾಗೂ ಸ್ಥಳೀಯ ಪೊಲೀಸರು ನೇರ ಹೊಣೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತನಿಖಾ ವರದಿಯಲ್ಲಿ “ಕಾರ್ಯಕ್ರಮ ನಡೆಸುವುದು ಅಸಾಧ್ಯ ಎಂಬುದು ಎಲ್ಲರಿಗೂ ತಿಳಿದಿದ್ದರೂ ಸಹ, ಉತ್ಸಾಹದ ಹೆಸರಿನಲ್ಲಿ ನಿರ್ಲಕ್ಷ್ಯತೆಯಿಂದ ವೇದಿಕೆ ಸಜ್ಜುಗೊಳಿಸಿ ಅಭಿಮಾನಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಕರ್ತವ್ಯ ಲೋಪ, ನಿರ್ಲಕ್ಷ್ಯತನದ ಪರಮಾವಧಿಯೇ ಎದ್ದು ಕಾಣುತ್ತದೆ,” ಎಂದು ಪ್ರಸ್ತಾಪಿಸಲಾಗಿದೆ. ಸಿಕ್ಕಾಪಟ್ಟೆ ಜನಸಂದಣಿಯನ್ನು ನಿರ್ವಹಿಸಲು ಕೇವಲ 79 ಪೊಲೀಸ್ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಲಾಗಿತ್ತು ಎಂಬುದು ಪೊಲೀಸ್ ಇಲಾಖೆಯ ನಿರೀಕ್ಷಿತ ಸಮಯಾನ್ವಯತೆಗೆ ಎದ್ದಿರುವ ಗಂಭೀರ ಪ್ರಶ್ನೆ.

ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಿರುವುದೇ ಈ ಘಟನೆಗೆ ಕಾರಣವಾದ ಪ್ರಮುಖ ಅಂಶವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಗೇಟುಗಳಲ್ಲಿ ನೂಕುನುಗ್ಗಲು ಉಂಟಾಗಿದ್ದು, ಗೇಟ್ ನಂ.12 ಬಳಿ ಅತ್ಯಂತ ಗಂಭೀರ ಸ್ಥಿತಿ ನಿರ್ಮಾಣವಾಗಿತ್ತು. ನೂರಾರು ಜನ ಸ್ಟೇಡಿಯಂಗೆ ಪ್ರವೇಶಿಸಲು ಪ್ರಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.

ಮಾಹಿತಿ ಪ್ರಕಾರ, ಘಟನೆ ನಡೆದ ಸಮಯದಲ್ಲಿ ನಗರ ಪೊಲೀಸ್ ಕಮಿಷನರ್‌ಗೆ ಘಟನೆಯ ಕುರಿತು ಯಾವುದೇ ಮಾಹಿತಿ ನೀಡಲಾಗಿರಲಿಲ್ಲ. ಕಾಲ್ತುಳಿತ ಸಂಜೆ 3:25ರ ಸುಮಾರಿಗೆ ನಡೆದಿದ್ದರೂ, ಕಮಿಷನರ್‌ರಿಗೆ ಸುದ್ದಿ ತಲುಪಿದ್ದು ಸಂಜೆ 5:30ರ ನಂತರ. ಇಂತಹ ಮಾದರಿಯ ದುರ್ಘಟನೆಗೂ ಶೀಘ್ರದಲ್ಲಿ ಪ್ರತಿಕ್ರಿಯೆ ನೀಡಲಾಗದಿರುವುದು ನಿರ್ವಹಣಾ ದೌರ್ಬಲ್ಯವನ್ನೇ ಬಿಚ್ಚಿಡುತ್ತದೆ.

ಸರ್ಕಾರದ ಮುಂದಿನ ಕ್ರಮ ಏನು?
ಈ ವರದಿ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕೃತವಾಗಿ ನೀಡಲಾಗಿದ್ದು, ಈ ಸಂದರ್ಭ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ವರದಿ ಇದೀಗ ಸರ್ಕಾರದ ಮುಂದಿನ ಕ್ರಮಕ್ಕೆ ಪಾಠವಾಗಲಿದೆ. ತಪ್ಪಿತಸ್ಥರು ಯಾರೇ ಆಗಿರಲಿ, ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕೆಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!