March 13, 2026
Friday, March 13, 2026
spot_img

ವಿದೇಶಿಗರಿಲ್ಲದೆ ಖಾಲಿ ಖಾಲಿ ಕಾಣ್ತಿವೆ ಬೆಂಗಳೂರಿನ ರಸ್ತೆ, ಕೆಫೆ, ಹೊಟೇಲ್‌ಗಳು! ಪ್ರವಾಸೋದ್ಯಮಕ್ಕೆ ಹೊಡೆತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇರಾನ್‌ -ಇಸ್ರೇಲ್‌ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ವಾರ್‌ ಎಫೆಕ್ಟ್‌ನಿಂದಾಗಿ ಎಲ್‌ಪಿಜಿ ವ್ಯತ್ಯಯ, ಪೆಟ್ರೋಲ್‌ ಬೆಲೆ ಏರಿಕೆ ಇನ್ನಿತರ ಸಮಸ್ಯೆಗಳು ಕಾಣಸಿಗುತ್ತಿವೆ. ಈ ಮಧ್ಯೆ ಬೆಂಗಳೂರಿನಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

ಬೇರೆ ದೇಶಗಳ ಯುದ್ಧದಿಂದ ಪ್ರವಾಸೋದ್ಯಮ ತತ್ತರಿಸಿದೆ. ಗಲ್ಫ್‌ ದೇಶಗಳಿಂದ ಬರುವ ಮಿಡಲ್‌ ಈಸ್ಟ್‌ ಏರ್‌ ಲೈನ್ಸ್‌ಗಳು ಬೆಂಗಳೂರಿಗೆ ಬರೋದು ಕ್ಯಾನ್ಸಲ್‌ ಆಗಿದೆ. ಕತಾರ್‌, ಎಮಿರೇಟ್ಸ್‌, ಒಮನ್‌ ಏರ್‌ಲೈನ್‌, ಇತಿಹಾರ್ಡ್‌, ಗಲ್ಫ್‌ ಏರ್‌, ಕುವೈತ್‌ ಏರ್‌ಲೈನ್ಸ್‌ ಹಾಗೂ ಏರ್‌ ಅರೇಬಿಯಾದಿಂದ ನಿತ್ಯ ಐದು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬೆಂಗಳೂರಿಗೆ ಬರುತ್ತಿದ್ದರು.

ಆದರೆ ಇದು ನಿಂತು ಹೋಗಿದೆ. ಮಾರ್ಚ್‌ನಲ್ಲಿ ಯಾವುದೇ ವಿದೇಶಿಗರು ಬಂದಿಲ್ಲ. ಬೆಂಗಳೂರಿನ ರಸ್ತೆ, ಕೆಫೆ, ಹೊಟೇಲ್‌ಗಳು ಖಾಲಿ ಖಾಲಿಯಾಗಿದೆ.

ಇನ್ನೂ ಬೆಂಗಳೂರಿನಿಂದ ಪ್ರತಿ ವರ್ಷ ರಂಜಾನ್‌ಗೆ ದುಬೈ, ಸೌದಿ ಅರೇಬಿಯಾ ಸೇರಿದಂತೆ ಹಲವು ಗಲ್ಫ್ ನಗರಗಳಿಗೆ ತೆರಳುತ್ತಿದ್ದ ಪ್ರವಾಸಿಗರು ಯುದ್ದದ ಭೀತಿ ಹಾಗೂ ಫ್ಲೈಟ್ ಅಲಭ್ಯತೆಯಿಂದ ಕ್ಯಾನ್ಸಲ್ ಮಾಡಿದ್ದಾರೆ. ಜೊತೆಗೆ ಬೇಸಿಗೆ ರಜೆಗೆ ಫಾರೀನ್ ಪ್ಲಾನ್ ಮಾಡಿದ್ದ ಬೆಂಗಳೂರಿಗರು ಸಹ ಕ್ಯಾನ್ಸಲ್ ಮಾಡ್ತಿದ್ದು, ರಾಜ್ಯ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದ್ರ ಜೊತೆಗೆ ಏರ್‌ಫೇರ್ ದರ ಸಹ ಹೆಚ್ಚಾಗಿದ್ದು, ಫ್ಲೈಟ್ ಟಿಕೆಟ್ ದರ ಯೂರೋಪಿಯನ್ ದೇಶಗಳಿಗೆ ಹೆಚ್ಚಾಗಿದೆ. ಉದಾಹರಣೆಗೆ ಬೆಂಗಳೂರಿನಿಂದ ಲಂಡನ್‌ಗೆ ಸುಮಾರು ಒಂದು ಲಕ್ಷದ ಮೇಲಾಗಿದೆ. ಇದು ಸಹ ಫಾರೀನ್ ಟ್ರಿಪ್ ಕ್ಯಾನ್ಸಲ್‌ಗೆ ಪ್ರಮುಖ ಕಾರಣವಾಗಿದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !