October 16, 2026
Friday, October 16, 2026
spot_img

EARTHQUAKE | ವಿಜಯಪುರದಲ್ಲಿ ಭೂಕಂಪನದ ಅನುಭವ: ಮನೆಯಿಂದ ಹೊರಕ್ಕೋಡಿಬಂದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಜಯಪುರದ ತಿಕೋಟಾ ತಾಲೂಕು ಸೇರಿದಂತೆ ಹಲವು ಕಡೆ ಇಂದು ಲಘು ಭೂಕಂಪನ ಸಂಭವಿಸಿದೆ.

ತಿಕೋಟಾ ತಾಲೂಕಿನ ಕಳ್ಳಕವಟಗಿ, ಬಾಬಾನಗರ, ಬಿಜ್ಜರಗಿ, ಸೋಮದೇವರಹಟ್ಟಿ, ಹಬನೂರು ಮತ್ತು ಟಕ್ಕಳಕಿ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಯಿಂದ ಹೊರಬಂದಿದ್ದಾರೆ.

ಮಹಾರಾಷ್ಟ್ರದ ಗಡಿ ಗ್ರಾಮಗಳಾದ ಮೊರಬಗಿ ಮತ್ತು ತಿಕ್ಕುಂಡಿಯಲ್ಲೂ ಕಂಪನ ವರದಿಯಾಗಿದೆ. ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ.

ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Must Read