ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ2022 ರ ವಾರ್ಷಿಕ ಪಟ್ಟಿಯ 7 ನೇ ಆವೃತ್ತಿ ‘ಹೌ ಇಂಡಿಯಾ ಸ್ವಿಗ್ಗಿ’ ಬಿಡುಗಡೆ ಮಾಡಿದ್ದು, ಇದರಲ್ಲಿ ಅತಿ ಹೆಚ್ಚು ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಿದ ಪ್ರಮುಖ ಮೂರು ಭಾರತೀಯ ನಾಗರಿಕರಲ್ಲಿ ಬೆಂಗಳೂರಿಗರು ಸೇರಿದ್ದಾರೆ.
ಬೆಂಗಳೂರಿನ ಇನ್ಸ್ಟಾಮಾರ್ಟ್ ಬಳಕೆದಾರರು ದಿನಸಿ ಮತ್ತು ಇತರೆ ಅಗತ್ಯ ವಸ್ತುಗಳ ಖರೀದಿಗೆ ಒಟ್ಟಾರೆ 16.6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಬೆಂಗಳೂರಿನ ಗ್ರಾಹಕರೊಬ್ಬರು ಒಂದೇ ದಿನ 75 ಸಾವಿರ ಮೌಲ್ಯದ ಆರ್ಡರ್ ಮಾಡಿದ್ದಾರೆ.
ಎರಡನೇ ಸ್ಥಾನದಲ್ಲಿ ಪುಣೆಯ ಗ್ರಾಹಕ ಇದ್ದು, ತಮ್ಮ ಆಫೀಸ್‌ನ ಎಲ್ಲ ಸಿಬ್ಬಂದಿಗೂ ಬರ್ಗರ್ ಹಾಗೂ ಫ್ರೈಸ್ ಆರ್ಡರ್ ಮಾಡಿದ್ದಾರೆ. ಇದಕ್ಕೆ 71 ಸಾವಿರ ರೂ. ಬಿಲ್ ಆಗಿದೆ. ಬೆಂಗಳೂರಿನ ಮತ್ತೊಬ್ಬ ಗ್ರಾಹಕ ವಾರದಲ್ಲೇ 118 ಬಾರಿ ಆಹಾರ ಆರ್ಡರ್ ಮಾಡಿದ್ದಾರೆ.
ಇನ್ನು ಆರೋಗ್ಯಕರ ಆಹಾರ ಖರೀದಿಯಲ್ಲಿಯೂ ಬೆಂಗಳೂರಿಗರು ಮುಂದಿದ್ದಾರೆ. ಡ್ರ್ಯಾಗನ್ ಫ್ರೂಟ್, ಕಿತ್ತಳೆ ಹಣ್ಣು, ವುಡ್ ಆಪಲ್‌ನ್ನು ಹೆಚ್ಚು ಆರ್ಡರ್ ಮಾಡಿದ್ದಾರೆ.