ವಿಶ್ವ ರಾಷ್ಟ್ರಗಳ ಕರೆ ಡೋಂಟ್ ಕೇರ್ ಎಂದ ಇಸ್ರೇಲ್: ಯಾರೂ ಕೂಡ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದ ಬೆಂಜಮಿನ್ ನೆತನ್ಯಾಹು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ 2 ತಿಂಗಳಿನಿಂದ ಗಾಜಾ ಮೇಲೆ ದಾಳಿ ನಡೆಸುತ್ತಿರುವ ಬೆನ್ನಲ್ಲೇ ಇಸ್ರೇಲ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದೆ.ಶೀಘ್ರದಲ್ಲೇ ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ ಆಗ್ರಹಿಸುತ್ತಿದ್ದು, ಆದ್ರೆ ಹಮಾಸ್ ನಿರ್ನಾಮದ ಹೊರತು ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ

ಅಮೆರಿಕಾ ಕೂಡ ಇಸ್ರೇಲ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗಿದೆ.
ಆದರೂ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಈ ಕುರಿತು ಹೇಳಿಕೆ ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಒತ್ತಡಗಳಿದ್ದರೂ, ಯಾರ ಬೆಂಬಲ ಲಭಿಸದಿದ್ದರೂ ನಾವು ಗಾಜಾದಲ್ಲಿ ಯುದ್ದವನ್ನು ಮುಂದುವರೆಸಲಿದ್ದೇವೆ. ಹಮಾಸ್ ಪಡೆ ನಿರ್ನಾಮವಾಗುವವರೆಗೂ, ವಿಜಯ ಲಭಿಸುವವರೆಗೂ ಹೋರಾಟ ಮುಂದುವರೆಸುತ್ತೇವೆಂದು ಹೇಳಿದ್ದಾರೆ.
ಬಹಳ ನೋವಿನಿಂದ ಈ ಮಾತನ್ನು ಹೇಳುತ್ತಿದ್ದೇನೆ. ಯಾರೂ ಕೂಡ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ನಡುವೆ ಟಿವಿಯೊಂದಕ್ಕೆ ಹೇಳಿಕೆ ನೀಡಿರುವ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್, ಇಸ್ರೇಲಿ ಪಡೆಗಳು ಗಾಜಾವನ್ನು ಎಂದಿಗೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ . ನೀವು ಎಲ್ಲಿಯವರೆಗೂ ಗಾಜಾದಲ್ಲಿ ಇರುತ್ತೀರೋ ಅಷ್ಟು ನಿಮ್ಮ ಸಾವು ಮತ್ತು ನಷ್ಟಗಳ ಮೊತ್ತ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಅಂತಿಮವಾಗಿ ದೇವರ ಇಚ್ಛೆಯಂತೆ ನೀವು ನಿರಾಶೆ ಮತ್ತು ನಷ್ಟದ ಬಾಲವನ್ನು ಹೊತ್ತುಕೊಂಡು ಅದರಿಂದ ಹೊರಬರುತ್ತೀರಿ. ಹಮಾಸ್ ಇಲ್ಲದೆ ಗಾಜಾದಲ್ಲಿ ಯಾವುದೇ ಭವಿಷ್ಯದ ವ್ಯವಸ್ಥೆಯು ಕೇವಲ ಒಂದು ಭ್ರಮೆಯಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಗಾಜಾದಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ ಬಳಿಕ ಇಸ್ರೇಲ್ನ ಪರಮಾತ್ಮ ರಾಷ್ಟ್ರವೆಂದೇ ಗುರುತಿಸಿಕೊಂಡಿರುವ ಅಮೆರಿಕಾದ ಬೆಂಬಲ ಕೂಡ ಲಭಿಸಿತ್ತು. ಆದರೆ, ಸದ್ಯ ಪ್ಯಾಲೆಸ್ತೀನ್ನಲ್ಲಿ ನಾಗರಿಕರ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಕ್ರಮದ ಬಗ್ಗೆ ಸ್ವತಃ ಅಮೆರಿಕಾ ಕೂಡ ಅಸಮಾಧಾನ ವ್ಯಕ್ತಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!