ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯುತ್ ದರ ಏರಿಕೆ ಹಿನ್ನೆಲೆ ರಾಜ್ಯದ ಕೆಲವೆಡೆ ವಿದ್ಯುತ್ ಬಿಲ್ ಕೇಳಿದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಅಹಿತಕರ ಘಟನೆಗಳು ನಡೆದಿರುವುದು ವರದಿಯಾಗಿವೆ. ಅದೇ ರೀತಿಯಾಗಿ ವಿದ್ಯುತ್ ಬಿಲ್ ನೀಡಿದ ಸಿಬ್ಬಂದಿ ಮೇಲೆ ಹಲ್ಲೆಯಾಗಿರುವ ಮತ್ತೊಂದು ಘಟನೆ ರಾಮನಗರದಲ್ಲಿ ನಡೆದಿದೆ.
ವಿದ್ಯುತ್ ಬಿಲ್ ನೀಡಲು ಹೋದ ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ರಂಪಾಟ ಮಾಡಿದ ಘಟನೆ ರಾಮನಗರದ ಟಿಪ್ಪು ಬಡಾವಣೆಯಲ್ಲಿ ನಡೆದಿದೆ.
ಲೈನ್ ಮ್ಯಾನ್ ರಫೀಕ್ ಹಾಗೂ ಮೀಟರ್ ರೀಡರ್ ಚಿನ್ಮಯ್ ಇಬ್ಬರೂ ಮನೆಯೊಂದಕ್ಕೆ ವಿದ್ಯುತ್ ಬಿಲ್ ಕೊಡಲು ಹೋಗಿದ್ದಾರೆ. ಈ ವೇಳೆ ಹೆಚ್ಚುವರಿ ಕರೆಂಟ್ ಬಿಲ್ ಬಂದಿದ್ದಕ್ಕೆ ರೇಗಾಡಿದ ಯುವಕನೊಬ್ಬ ಸಿಬ್ಬಂದಿಗಳ ವಿರುದ್ಧ ಕೂಗಾಡಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ರಾಮನಗರಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.