ದೋಸೆ ನಾಡಾದ ನಮ್ಮ ಬೆಂಗಳೂರು, ದೇಶದಾದ್ಯಂತ ದೋಸೆ ಪ್ರಿಯರ ಮನ ಗೆಲ್ಲುವ ನಗರವಾಗಿ ಬೆಳದಿದೆ. ಇಲ್ಲಿ ಸಿಗುವ ರುಚಿಯಾದ ದೋಸೆ ತಿಂದರೆ, ಮತ್ತೆ ಮತ್ತೆ ಬರುವ ಆಸೆ ಆಗೋದು ಖಂಡಿತ. ಇಲ್ಲಿದೆ ನಗರದಲ್ಲಿ ದೋಸೆ ಪ್ರಿಯರ ಪಾಲಿಗೆ ಟಾಪ್ 5 ದೋಸೆ ತಾಣಗಳ ಮಾಹಿತಿ.
ವಿದ್ಯಾರ್ಥಿ ಭವನ (Vidyarthi Bhavan) – ಬಸವನಗುಡಿ
ಬಸವನಗುಡಿಯ ಹೃದಯಭಾಗದಲ್ಲಿರುವ ಈ ಹಳೆಯ ಹೋಟೆಲ್ ದಶಕಗಳಿಂದ ದೋಸೆ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಕ್ರಿಸ್ಪಿ ಅಂಡ್ ಸಾಫ್ಟ್ ಮಸಾಲೆ ದೋಸೆ, ಗಟ್ಟಿಯಾದ ಮೆಣಸಿನಕಾಯಿ ಚಟ್ನಿ ಮತ್ತು ಹಳೆಯ ಬೆಂಗಳೂರಿನ ಶಾಂತಿಕರ ವಾತಾವರಣ ಇಲ್ಲಿ ಲಭ್ಯ.
ಶ್ರೀ ಸಾಗರ್ ಸಿ.ಟಿ.ಆರ್ (Shri Sagar CTR) – ಮಲ್ಲೇಶ್ವರಂ
ಪೂರ್ವದಲ್ಲಿ ಸಿ.ಟಿ.ಆರ್ ಎಂಬ ಹೆಸರಿನಲ್ಲಿ ಪ್ರಸಿದ್ಧಿಯಾದ ಈ ಹೋಟೆಲ್ ತನ್ನ ಸೂಪರ್ ಕ್ರಿಸ್ಪಿ ಬೆಣ್ಣೆ ದೋಸೆಯಿಂದ ಪ್ರಖ್ಯಾತಿ ಗಳಿಸಿದೆ. ಬೆಳಿಗ್ಗೆ ಗಂಟೆ 7ರಲ್ಲೇ ಇಲ್ಲಿ ಕ್ಯೂ ಆರಂಭವಾಗುವುದು ಸಾಮಾನ್ಯ.
ಮಾವಳ್ಳಿ ಟಿಫಿನ್ ರೂಮ್ಸ್ (MTR) – ಲಾಲ್ ಬಾಗ್ ಬಳಿ
ಲಾಲ್ ಬಾಗ್ ಬಿಟ್ಟರೂ ಈ ಜಾಗ ಹೆಸರಾದದ್ದು ಇಲ್ಲಿನ ವಿಶಿಷ್ಟ ಮಸಾಲೆ ದೋಸೆ, ತುಪ್ಪ, ಸಾಂಬಾರ್ ಮತ್ತು ವಿಭಿನ್ನ ರೀತಿಯ ಚಟ್ನಿಗಳಿಂದ. ಇಲ್ಲಿ ಸಿಗುವ ರುಚಿ ಒಂದು ತಲೆಮಾರಿಗೆ ಉಳಿಯುವ ಅನುಭವ ನೀಡುತ್ತದೆ.
ತಾಜಾ ತಿಂಡಿ (Taaza Thindi) – ಜಯದೇವ್ ನಗರ
ಶುದ್ಧತೆ, ಸ್ಪೀಡ್ ಮತ್ತು ರುಚಿಯ ಸಮನ್ವಯವಿರುವ ತಾಜಾ ತಿಂಡಿಯಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ದೋಸೆ ಇಲ್ಲಿ ಸಿಗುತ್ತದೆ. ಯುವಜನತೆಯಲ್ಲೂ ಇದು ನೆಚ್ಚಿನ ತಾಣವಾಗಿದೆ.
ದಿ ರಾಮೇಶ್ವರಂ ಕಫೆ (The Rameshwaram Cafe) – ಇಂದಿರಾನಗರ/ಜೆಪಿ ನಗರ
ಇತ್ತೀಚೆಗೆ ಜಾಸ್ತಿಯಾಗಿರುವ ಖ್ಯಾತಿಯೊಂದಿಗೆ, ಈ ಕಫೆ ತನ್ನ ಕ್ರಿಸ್ಪಿ ಮತ್ತು ತುಪ್ಪದ ಸವಿ ದೋಸೆಗೆ ಜನಮನ ಸೆಳೆಯುತ್ತಿದೆ. ಬಟರ್ ದೋಸೆ, ಗೋಲ್ಡನ್ ಬ್ರೌನ್ ಮಸಾಲೆ, ಸುಗಂಧಿತ ಚಟ್ನಿಗಳು ಇದರ ಪ್ರಸಿದ್ದಿಗೆ ಕಾರಣವಾಗಿದೆ.
ದೋಸೆ ಗೆ ಹಳೆ ಅಕ್ಕಿ ಉಪಯೋಗ ಮಾಡಬೇಕು. ಉದ್ದಿನಬೇಳೆ ಅಕ್ಕಿ ಸೂಕ್ತ ಪ್ರಮಾಣದಲ್ಲಿರಬೇಕು. ದೋಸೆ ಮಂದವಾಗಿರಬೇಕು. ತುಪ್ಪ ಹಾಕಿ ಮಾಡಬೇಕು. ಗರಿ ಗರಿ ಯಾಗಲೂ ತೆಳ್ಳಗೆ ಮಿಶ್ರಣ ಹಾಕಬೇಕು.ಮಂದವಾಗಿರುವ ದೋಸೆ ತಿನ್ನಲು ಉತ್ತಮ.ಅಕ್ಕಿ,ಉದ್ದಿನಬೇಳೆ, ಎಣ್ಣೆ ತುಪ್ಪ ತಯಾರಿಕೆ ಖರ್ಚು ಮಾರಾಟ ಮಾಡುವ ಬೆಲೆ ತುಂಬಾ ವ್ಯತ್ಯಾಸ ಇರುತ್ತದೆ ಇದನ್ನು ಪರಿಶೀಲಿಸಿ ಬೆಲೆ ನಿಗದಿ ಮಾಡುತ್ತಿಲ್ಲ. ಹೋಟೆಲ್, ಧಾಬಾ ಇಲ್ಲೆಲ್ಲ ಹೆಚ್ಚಿನ 45% ಆದಾಯ ಬರುವುದು ಖಂಡಿತಾ. BVS 86