September 29, 2026
Tuesday, September 29, 2026
spot_img

ಲಕ್ಷಾಂತರ ಭಕ್ತರ ನಂಬಿಕೆಗೆ ದ್ರೋಹ: ಹಣ ಕದ್ದವರಿಗೆ ಮೋದಿ-ಯೋಗಿ ಸರ್ಕಾರದಿಂದ ಶಿಕ್ಷೆ ಗ್ಯಾರಂಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಾಲಯದ ದೇಣಿಗೆ ಹಣ ದುರುಪಯೋಗವಾಗಿರುವ ಘಟನೆ ಭಕ್ತರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಈ ಹಗರಣದ ಕುರಿತು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಾದ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಮೊದಲ ಬಾರಿಗೆ ತುಟಿ ಬಿಚ್ಚಿದ್ದು, ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಭಕ್ತರ ನಂಬಿಕೆಗೆ ದ್ರೋಹ ಎಸಗಿದವರಿಗೆ ಶಿಕ್ಷೆ ಖಚಿತ

ಸೋಮವಾರ ನಡೆಯಲಿರುವ ಟ್ರಸ್ಟ್‌ನ ಪ್ರಮುಖ ಸಭೆಗೂ ಮುನ್ನ ಮಾತನಾಡಿದ ಹಿರಿಯ ಯತಿಗಳು, “ರಾಮಲಲ್ಲಾನಿಗೆ ಅರ್ಪಿಸಿದ ಕಾಣಿಕೆಯನ್ನು ಕಳ್ಳತನ ಮಾಡಿರುವುದು ಅಕ್ಷಮ್ಯ ಅಪರಾಧ. ಇದು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ” ಎಂದು ಆತಂಕ ಹಂಚಿಕೊಂಡಿದ್ದಾರೆ. ಈ ಪಾಪಕೃತ್ಯ ಎಸಗಿದ ಪ್ರತಿಯೊಬ್ಬ ಆರೋಪಿಯನ್ನೂ ಕಾನೂನಿನ ಮುಂದೆ ನಿಲ್ಲಿಸಿ, ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮೋದಿ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರಗಳ ಮೇಲೆ ಪೂರ್ಣ ಭರವಸೆ

ವಿಷಯದ ಗಂಭೀರತೆಯನ್ನು ಪ್ರಸ್ತಾಪಿಸಿದ ನೃತ್ಯ ಗೋಪಾಲ್ ದಾಸ್ ಅವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ತಮಗೆ ಅಪಾರ ನಂಬಿಕೆಯಿದೆ ಎಂದಿದ್ದಾರೆ. ಈ ಇಬ್ಬರೂ ನಾಯಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಭ್ರಷ್ಟಾಚಾರಿಗಳಿಗೆ ಸೂಕ್ತ ಕಾನೂನು ಪಾಠ ಕಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತನಿಖೆ ಚುರುಕುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ.

Must Read