ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿವುಡ್ ನ ಆಪನ್ ಹೈಮರ್ ಚಿತ್ರದಲ್ಲಿ ಲೈಂಗಿಕ ಕ್ರಿಯೆ ವೇಳೆ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯವಿದ್ದು, ಈ ದೃಶ್ಯಕ್ಕೆ ಭಾರತೀಯರು ತ್ರೀವ ವಿರೋಧ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಕುರಿತಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಕೂಡ ಪ್ರತಿಕ್ರಿಯೆ ನೀಡಿದ್ದು, ‘ಈ ದೃಶ್ಯವನ್ನು ಸಿನಿಮಾದಲ್ಲಿ ಹೇಗೆ ಬಿಡಲಾಯಿತು ಎಂದು ಸೆನ್ಸಾರ್ ಮಂಡಳಿಯ ಅಧಿಕಾರಿಯನ್ನು ಕೇಳಲಾಗುವುದು. ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಜುಲೈ 21ರಂದು ರಿಲೀಸ್ ಆಗಿರೋ ಹಾಲಿವುಡ್‌ನ ‘ಆಪನ್‌ಹೈಮರ್’ (Oppenheimer) ಸಿನಿಮಾದ ರಿಲೀಸ್‌ಗೂ ಮುನ್ನವೇ ಭರ್ಜರಿ ಡಿಮ್ಯಾಂಡ್ ಶುರುವಾಗಿತ್ತು. ಆದರೆ ಈ ಸಿನಿಮಾದಲ್ಲಿನ ಆ ಒಂದು ದೃಶ್ಯಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಹೀರೋ ಸೆಕ್ಸ್ ಮಾಡುವಾಗ ಭಗವದ್ಗೀತೆ ಹೇಳುವ ಸಂಭಾಷಣೆ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಯುಕ್ತ ಉದಯ್ ಮಹುರ್ಕರ್ ತಕರಾರು ತೆಗೆದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ‘ಆಪನ್‌ಹೈಮರ್’ ಚಿತ್ರತಂಡಕ್ಕೆ ಪ್ರಶ್ನೆ ಮಾಡಿದ್ದಾರೆ. ಈ ದೃಶ್ಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ.
ಅಣುಬಾಂಬ್ ಕಂಡು ಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್ ಆಪನ್‌ಹೈಮರ್ ಅವರ ಜೀವನದ ಕಥೆ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಆಪನ್‌ಹೈಮರ್ ಪಾತ್ರವನ್ನು ಕಿಲಿಯನ್ ಮರ್ಫಿ ಮಾಡಿದ್ದಾರೆ.