ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದವನ್ನು ಮನು ಭಾಕರ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಹೀಗಾಗಿ ಭಾರತದ ಸಂಭ್ರಮ ಹೆಚ್ಚಾಗಿದೆ.
ಇದೇ ವೇಳೆ ಪದಕ ಗೆದ್ದ ಖುಷಿಯಲ್ಲಿರುವ ಮನು ಭಾಕರ್ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಭಗವತ್ ಗೀತೆಯಲ್ಲಿ ಶ್ರೀಕೃಷ್ಣ, ಅರ್ಜುನನಿಗೆ ನೀಡಿದ ಉಪದೇಶವನ್ನು ಸ್ಮರಿಸಿಕೊಂಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಭಾರತವು 2012ರಿಂದೀಚಗೆ ಶೂಟಿಂಗ್‌ನಲ್ಲಿ ಪದಕ ಗೆಲ್ಲಲು ವಿಫಲವಾಗಿತ್ತು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಗಗನ್ ನಾರಂಗ್ ಕೊನೆಯದಾಗಿ ಭಾರತಕ್ಕೆ ಪದಕ ಜಯಿಸಿದ್ದರು. ಇದೀಗ ಮನು ಭಾಕರ್, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಕಂಚಿನ ಪದಕ ಜಯಿಸುವುದರೊಂದಿಗೆ, ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಮೊದಲ ಮಹಿಳಾ ಶೂಟರ್ ಎನ್ನುವ ಚಾರಿತ್ರಿಕ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಮಾತನಾಡಿದ ಮನು ಭಾಕರ್, ಇದು ಭಾರತಕ್ಕೆ ಅನಿವಾರ್ಯ ದೀರ್ಘಕಾಲದ ಪದಕವಾಗಿತ್ತು. ಸಾಧನೆಯ ಹಾದಿಯಲ್ಲಿ ನಾನು ಕೇವಲ ನೆಪವಷ್ಟೇ. ಭಾರತ ಇನ್ನೂ ಹೆಚ್ಚಿನ ಪದಕಗಳಿಗೆ ಅರ್ಹವಾಗಿದೆ. ನಾವು ಈ ಬಾರಿ ಸಾಧ್ಯವಾದಷ್ಟು ಪದಕಗಳನ್ನು ಗೆಲ್ಲಲು ಎದುರು ನೋಡುತ್ತಿದ್ದೇವೆ. ವೈಯಕ್ತಿಕವಾಗಿ ನನಗೆ ಈ ಭಾವನೆ ಅತಿವಾಸ್ತವಿಕವಾಗಿದೆ. ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಕೊನೆಯ ಶಾಟ್ ವರೆಗೂ ನಾನು ಎಲ್ಲಾ ಶಕ್ತಿಯೊಂದಿಗೆ ಹೋರಾಡುತ್ತಿದ್ದೆ ಎಂದು ಮನು ಹೇಳಿದ್ದಾರೆ.
ನಾನು ಭಗವತ್ ಗೀತೆ ಓದಿದ್ದು, ಪದಕ ಗೆಲ್ಲಲು ನೆರವಾಯಿತು. ನಾನು ಬಹಳಷ್ಟು ಬಾರಿ ಓದಿದ್ದೇನೆ, ಆದ್ದರಿಂದ ನನ್ನ ಮನಸ್ಸಿನಲ್ಲಿ ಅದೇ ಇತ್ತು ‘ನೀವು ಏನನ್ನು ಮಾಡಬೇಕೋ ಅದನ್ನು ಮಾಡಿ, ಫಲವನ್ನು ನನಗೆ ಬಿಟ್ಟು ಬಿಡಿ ಎಂಬ ಸಾರ ನೆನಪಾಗುತ್ತಿತ್ತು. ವಿಧಿಯನ್ನು ನೀವು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಎಂಬುದು, ಇನ್ನು ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಹೇಳುವ’ನೀವು ಕರ್ಮದ ಮೇಲೆ ಗಮನವಿಡಿ. ಫಲಿತಾಂಶದ ಮೇಲೆ ಅಲ್ಲ’, ಉವಾಚ ನನ್ನ ತಲೆಯಲ್ಲಿ ಓಡುತ್ತಿತ್ತು ಎಂದು ಮನು ಹೇಳಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾನು ತುಂಬಾ ನಿರಾಶೆಗೊಂಡಿದ್ದೆ. ಅದರಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯಿತು. ಮುಗಿದು ಹೋಗಿದ್ದು ಹೋಯಿತು. ನಾವು ವರ್ತಮಾನದ ಮೇಲೆ ಕೇಂದ್ರೀಕರಿಸೋಣ. ಈ ಪದಕವು ಯಾವಾಗಲೂ ತಂಡದ ಕೆಲಸವಾಗಿದೆ. ನಾನು ಅದನ್ನು ಮಾಡಲು ಒಂದು ನೆಪವಾಗಿದ್ದೆ ಎಂದು ಅವರು ಹೇಳಿದ್ಧಾರೆ.