ಹೊಸದಿಗಂತ ವರದಿ,ಶಿವಮೊಗ್ಗ :
ಪಕ್ಷದ ಹಿರಿಯರಾಗಿದ್ದ ಭಾನುಪ್ರಕಾಶ್ ಅವರ ನಿಧನ ಸಂಘಟನೆಗೆ ತುಂಬಲಾರದ ನಷ್ಟ. ಅವರ ಪ್ರೇರಣೆ ನಮ್ಮ ಜೊತೆಗೆ ಇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಸಮೀಪದ ಮತ್ತೂರಿನ ಭಾನು ಪ್ರಕಾಶ್ ಅವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.
ಪಕ್ಷದ ಹಿರಿಯರಾದ ಭಾನುಪ್ರಕಾಶ್ ಅವರ ಅಗಲಿಕೆ ಕಾರ್ಯಕರ್ತರಿಗೆ ದಿಗ್ಭ್ರಮೆ ಉಂಟು ಮಾಡಿದೆ.
ಭಾನುಪ್ರಕಾಶ್ ಅವರ ಇಡೀ ಕುಟುಂಬವೇ ಸಂಘಕ್ಕಾಗಿ ದುಡಿದಿದೆ. ಯಾರಿಗೂ ನೋಯಿಸದೇ ಪರಿಶುದ್ಧ ರಾಜಕೀಯವನ್ನು ಭಾನುಪ್ರಕಾಶ್ ಮಾಡಿಕೊಂಡು ಬಂದಿದ್ದರು ಎಂದು ಸ್ಮರಿಸಿದರು.