‘ಭಾರತ ರತ್ನ’ ನನ್ನ ಜೀವಮಾನದ ಆದರ್ಶಗಳಿಗೆ ಸಂದ ಗೌರವ: ಎಲ್‌ಕೆ ಅಡ್ವಾಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಭಾರತ ರತ್ನ ಪ್ರಶಸ್ತಿ’ ನನ್ನ ಜೀವಮಾನದ ಆದರ್ಶಗಳಿಗೆ ಸಂದ ಗೌರವ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.

ಭಾರತ ರತ್ನ ನೀಡುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಿದ ಬಿಜೆಪಿ ಹಿರಿಯ ನಾಯಕ ಪ್ರತಿಕ್ರಿಯೆ ನೀಡಿದ ಎಲ್.ಕೆ. ಅಡ್ವಾಣಿ, ತಮ್ಮ ಆದರ್ಶಗಳು ಮತ್ತು ತತ್ವಗಳಿಗೆ ಇದು ‘ಗೌರವ’ . ಇಂದು ನನಗೆ ನೀಡಲಾದ ಭಾರತ ರತ್ನವನ್ನು ನಾನು ಅತ್ಯಂತ ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ ಎಂದಿದ್ದಾರೆ. .

ಇದು ಒಬ್ಬ ವ್ಯಕ್ತಿಯಾಗಿ ನನಗೆ ಮಾತ್ರವಲ್ಲ, ನನ್ನ ಜೀವನದುದ್ದಕ್ಕೂ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಶ್ರಮಿಸಿದ ಆದರ್ಶಗಳು ಮತ್ತು ತತ್ವಗಳಿಗೆ ಸಂದ ಗೌರವವಾಗಿದೆ ಎಂದಿದ್ದಾರೆ.

ತಮಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದಕ್ಕಾಗಿ ಅಡ್ವಾಣಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.

‘ನನ್ನ ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ, ವಿಶೇಷವಾಗಿ ನನ್ನ ಪ್ರೀತಿಯ ಅಗಲಿದ ಪತ್ನಿ ಕಮಲಾ ಅವರ ಬಗ್ಗೆ ನನ್ನ ಆಳವಾದ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ಅವರು ನನ್ನ ಜೀವನದಲ್ಲಿ ಶಕ್ತಿ ಮತ್ತು ಸುಸ್ಥಿರತೆಯ ದೊಡ್ಡ ಮೂಲವಾಗಿದ್ದಾರೆ’ ಎಂದು ಅವರು ಹೇಳಿದರು.

ಸಿಹಿ ತಿನ್ನಿಸಿ ಸಂಭ್ರಮಿಸಿದ ಅಡ್ವಾಣಿ ಪುತ್ರಿ
ಎಲ್‌ಕೆ ಅಡ್ವಾಣಿಗೆ ಭಾರತ್ ರತ್ನ ಘೋಷಣೆ ಆಗುತ್ತಿದ್ದಂತೆ . ದೇಶಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇತ್ತ ಅಡ್ವಾಣಿ ಮನೆಯಲ್ಲಿ ಸಂಭ್ರಮದ ವಾತವರಣ ನಿರ್ಮಾಣವಾಗಿದೆ. ಅಡ್ವಾಣಿಗೆ ಸಿಹಿ ತಿನ್ನಿಸಿ ಸಂಭ್ರಮ ಆಚರಿಸಲಾಗಿದೆ. ಅಡ್ವಾಣಿ ಪುತ್ರಿ ಪ್ರತಿಭಾ ಅಡ್ವಾಣಿ, ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಕೇಸರಿ ಜಾಕೆಟ್ ಮೂಲಕ ಕಾಣಿಸಿಕೊಂಡ ಅಡ್ವಾಣಿ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಹಲವು ಬಿಜೆಪಿ ನಾಯಕರು, ಕಾರ್ಯಕರ್ತರು ಅಡ್ವಾಣಿಗೆ ಮನೆಗೆ ತೆರೆಳಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!