ಹೊಸದಿಗಂತ ವರದಿ, ಮೈಸೂರು:
ಹಿರಿಯ ಮುತ್ಸದ್ಧಿ ರಾಜಕಾರಣಿ ಲಾಲ್ಕೃಷ್ಣ ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರ ದೇಶದ ಅತ್ಯುನ್ನುತ ಪ್ರಶಸ್ತಿಯಾದ ಭಾರತ ರತ್ನವನ್ನು ಘೋಷಿಸಿರುವುದು ಶ್ರೀರಾಮನ ಕೋಟ್ಯಾಂತರ ಮಂದಿ ಭಕ್ತರಿಗೆ ಸಂತಸವನ್ನುoಟು ಮಾಡಿದೆ ಎಂದು ಬಿಜೆಪಿಯ ಮಾಜಿ ಸಚಿವ ಎಸ್. ಎ ರಾಮದಾಸ್ ಹೇಳಿದರು.
ಲಾಲ್ ಕೃಷ್ಣ ಅಡ್ವಾನಿ ರವರು ರಾಮಜನ್ಮ ಭೂಮಿ ಹೋರಾಟ ಪ್ರಾರಂಭ ಮಾಡಿದರು. ನಂತರದಲ್ಲಿ ಅಖಂಡ ಭಾರತ ನಿರ್ಮಾಣ ಕನಸು ಬಹಳ ವರ್ಷಗಳಿಂದ ಕಾಶ್ಮೀರದ ಆರ್ಟಿಕಲ್ ೩೭೦ರ ರದ್ದುಗೊಳಿಸಿಲು ಹೋರಾಟ ನಡೆಸಿದ್ದು. ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ಬಲಿಷ್ಟವಾಗಿ ಬೇರೂರಲು ಸಾಕಷ್ಟು ಕೆಲಸ ಮಾಡಿದ್ದಾರೆ, ಲಕ್ಷಂತಾರ ಯುವ ಕಾರ್ಯಕರ್ತರಿಗೆ ಆದರ್ಶವಾಗಿದ್ದಾರೆ. ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಶಿಸ್ತು ಸಮಯ ಪರಿಪಾಲನೆ ಆಹಾರಪದ್ದತಿ ಇಂದಿಗೂ ರಾಜಕಾರಣಿಗಳ ನೆಮ್ಮದಿಯ ಬದುಕಿಗೆ ಸಂದೇಶವಾಗಿದೆ ಎಂದು ತಿಳಿಸಿದರು.
ಇವತ್ತು ಅವರಿಗೆ ಭಾರತರತ್ನ ಸಂದಿರುವ ವಿಚಾರ ತಿಳಿದಾಗ ಮತ್ತು ಅವರಿಗೆ ಸಮರ್ಪಿಸಿದವರು ಯಾರು ಎಂದು ನೋಡಿದಾಗ ಸಾಕ್ಷಾತ್ ಶ್ರೀರಾಮನ ರೀತಿ ಹೋರಾಟ ಮಾಡಿದಾಗ ಅವರ ಜೊತೆ ಆಂಜನೇಯನ ಹಾಗೆ ನಿಂತoತಹ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ರವರು ಎನ್ನುವ ಚಿತ್ರಣ ನಮಗೆ ಕಾಣಸಿಗುತ್ತದೆ. ಕಾಶ್ಮೀರ ಉಳಿಯಬೇಕು ಎನ್ನುವ ಗೋಡಾ ಚಳುವಳಿ ಎಲ್.ಕೆ ಅಡ್ವಾನಿ ರವರ ದಿಟ್ಟ ಹೋರಾಟ. ಅವರನ್ನ ನಮಗೆ ಪರಿಚಯಿಸಿದ ಅನಂತ್ ಕುಮಾರ್ ರವರು ಆ ಸಂದರ್ಭದಲ್ಲಿ ಗೋಡಾ ಚಳುವಳಿಯಲ್ಲಿ ಕಾಶ್ಮೀರ್ ಚಲೋ ಲಾಲ್ ಚೌಕ್ ನಲ್ಲಿ ಭಾವುಟ ಹಾರಿಸುವಾಗ, ಆ ಸಮಯದಲ್ಲಿ ಕಲಿತಂತಹ ಶಿಸ್ತು ಮರೆಯುವ ಹಾಗಿಲ್ಲ. ನಮ್ಮ ಜೀವನಕ್ಕೂ ಅದು ಮಾದರಿಯಾಗಿದೆ. ಕೇವಲ ಒಬ್ಬ ರಾಜಕಾರಣಿಯಾಗದೇ ದೇಶದ ಅಭಿವೃದ್ಧಿ ಆಡಳಿತ ಚಿಂತನೆಯುಳ್ಳ ಕ್ರಿಯಾಶೀಲತೆಯ ಹರಿಕಾರರಾಗಿದ್ದರು, ವಿರೋಧಪಕ್ಷಗಳು ಸಹ ಲಾಲ್ ಕೃಷ್ಣ ಅಡ್ವಾಣಿರನ್ನ ಮೆಚ್ಚುವಂತ ದಿನಗಳಾಗಿದ್ದವು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.