CINE | ಭಾವನಾ ಮೆನನ್‌ – ನವೀನ್‌ ಡಿವೋರ್ಸ್‌? ಫಸ್ಟ್‌ ಟೈಮ್‌ ಮಾತನಾಡಿದ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಭಾವನಾ ಮೆನನ್‌ ಡಿವೋರ್ಸ್‌ ರೂಮರ್ಸ್‌ ಹರಿದಾಡುತ್ತಿದ್ದು, ಈ ಬಗ್ಗೆ ಮೊದಲ ಬಾರಿಗೆ ಭಾವನಾ ಮಾತನಾಡಿದ್ದಾರೆ. ನಾನು ನವೀನ್‌ ಚೆನ್ನಾಗಿಯೇ ಇದ್ದೇವೆ, ಡಿವೋರ್ಸ್‌ ಪಡೆಯುತ್ತಿಲ್ಲ. ತಲೆ ಬುಡ ಇಲ್ಲದೆ ರೂಮರ್ಸ್‌ ಹರಡುತ್ತವೆ, ಇವು ನಿಲ್ಲಬೇಕು ಎಂದಿದ್ದಾರೆ.

Bhavana Menon celebrates 3rd wedding anniversary with Naveen, shares  beautiful pics - India Todayಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವಂತಹ ಜೋಡಿ ನಾವಲ್ಲ. ಚಿನ್ನ, ಮುದ್ದು ಅಂತ ಕ್ಯಾಪ್ಷನ್ ಕೊಡಲ್ಲ. ಏನಾದರೂ ನಾನು ಫೋಟೋವೊಂದನ್ನು ಪೋಸ್ಟ್ ಮಾಡಿದರೆ, ಅಯ್ಯೋ ಇದು ಹಳೆಯ ಫೋಟೋ ಎನ್ನುತ್ತಾರೆ. ನಿಮ್ಮ ನಡುವೆ ಸಮಸ್ಯೆ ಇದ್ಯಾ? ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡ್ತಾರೆ. ಅದಕ್ಕೆ ನಾನು ಪ್ರತಿ ನಿತ್ಯ ನಾವು ಫೋಟೋ ತೆಗೆದುಕೊಳ್ಳಲ್ಲ ಎನುತ್ತೇನೆ ಎಂದಿದ್ದಾರೆ.

Bhavana Menon | Celebrity Bride | WeddingSutraಮನೆಯಲ್ಲಿ ಅಮ್ಮ, ಅಣ್ಣ ಎಲ್ಲರೂ ಇದ್ದಾರೆ. ಎಲ್ಲರೊಂದಿಗೆ ಪ್ರತಿದಿನ ಫೋಟೋ ಕ್ಲಿಕ್ಕಿಸಿಕೊಂಡು ಕೂರೋಕೆ? ಆಗುತ್ತಾ ಎಂದಿದ್ದಾರೆ. ನನ್ನ ವೈಯಕ್ತಿಕ ಜೀವನವನ್ನು ಪಬ್ಲಿಕ್ ಮಾಡಿ ಹೇಳಿಕೊಳ್ಳುವಂತಹ ವ್ಯಕ್ತಿ ನಾನಲ್ಲ. ನಾನು ಮತ್ತು ನವೀನ್ ಚೆನ್ನಾಗಿದ್ದೇವೆ. ಸದ್ಯಕ್ಕೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ನಾವು ಚೆನ್ನಾಗಿದ್ದೇವೆ ಎಂದು ಪ್ರೂವ್ ಮಾಡಲು ಯಾವಾಗಲೂ ಫೋಟೋ ಹಾಕ್ತಾ ಕೂರುವುದಕ್ಕೆ ಆಗಲ್ಲ ಎಂದು ಡಿವೋರ್ಸ್ ವದಂತಿಗೆ ನಟಿ ತೆರೆ ಎಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!