ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ‘ಭೋಗ್’ (ಬ್ಲಿಸ್‌ಫುಲ್ ಹೈಜಿನಿಕ್ ಆಫರಿಂಗ್ ಟು ಗಾಡ್)
ಪ್ರಮಾಣ ಪತ್ರ ನೀಡಿದೆ.
ದೇವಳದಲ್ಲಿ ನೀಡಲಾಗುವ ಪ್ರಸಾದ ಭೋಜನದ ಗುಣಮಟ್ಟ, ಅಲ್ಲಿನ ಸ್ವಚ್ಛತೆಯನ್ನು ಪರಿಗಣಿಸಿ ಈ ಪ್ರಮಾಣಪತ್ರ ನೀಡಲಾಗುತ್ತದೆ. ಜೊತೆಗೆ ಆಹಾರ ತಯಾರಿಕಾ ಕೊಠಡಿ, ಸೋರುವಿಕೆ ರಹಿತ ಗೋಡೆ ಛಾವಣಿ, ನೆಲಹಾಸು, ತುಕ್ಕು ಹಿಡಿಯದ ಕಿಟಕಿ ಬಾಗಿಲು, ಆಹಾರ ತಯಾರಿಸುವ ಪಾತ್ರೆಗಳ ಗುಣಮಟ್ಟ, ದಾಸ್ತಾನು ಕೊಠಡಿ, ಪಾತ್ರೆ ತೊಳೆಯುವ ನೀರು, ತ್ಯಾಜ್ಯ ವಿಲೇವಾರಿ ಇತ್ಯಾದಿಗಳ ಗುಣಮಟ್ಟದ ಮೇಲೂ ಪರೀಕ್ಷೆ ನಡೆಸಲಾಗುತ್ತದೆ.