ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ಮುಂದೆ ಸಂದರ್ಶನ ಇದೆ ಬನ್ನಿ ಅಂತ ಯಾರಾದರು ಕರೆದರೆ, ಒಮ್ಮೆ ಯೋಚಿಸಿ ಹೆಜ್ಜೆ ಇಡಿ. ಏಕೆಂದರೆ ಸಂದರ್ಶನದ ನೆಪದಲ್ಲಿ ಕರೆದು ನಟಿಯೊಬ್ಬಳಿಗೆ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ.
ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯೋರ್ವನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಭೋಜ್ಪುರಿ ನಟಿಯೊಬ್ಬಳು ದೂರು ದಾಖಲಿಸಿದ್ದಾರೆ.
ಆತ ಸಂದರ್ಶನದ ನೆಪದಲ್ಲಿ ಗುರುಗ್ರಾಮದ ಹೋಟೆಲ್ಗೆ ಕರೆದು, ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ನಟಿ ಉಲ್ಲೇಖಿಸಿದ್ದಾರೆ.
ಅತ್ಯಾಚಾರದ ಕುರಿತು ಹೊರಗಡೆ ಎಲ್ಲಾದರು ಮಾತನಾಡಿದರೆ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ದೂರಿದ್ದಾಳೆ.
ಆರೋಪಿ ಮಹೇಶ್, ಗುರುಗ್ರಾಮದ ಛಕ್ಕಪುರ್ ಏರಿಯಾದ ನಿವಾಸಿ. ಆತನ ವಿರುದ್ಧ ಉದ್ಯೋಗ ವಿಹಾರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.