ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಣ್ಣ ಪುಟ್ಟ ವಸ್ತುವಾದರೆ ಮಿಸ್ ಆಗಿ ನುಂಗಿದ್ದಾರೆ ಎನ್ನಬಹುದು ಆದರೆ ಟೂತ್‌ಬ್ರಶ್ ಮಿಸ್ ಆಗಿ ನುಂಗೋಕೆ ಹೇಗೆ ಸಾಧ್ಯ?
ರಾಜಸ್ಥಾನದ ಚಿತ್ತೋರ್‌ನ ವ್ಯಕ್ತಿಯೊಬ್ಬರು ಬ್ರಶ್ ಮಾಡುವಾಗ 12 ಸೆಂಟಿಮೀರ್ ಉದ್ದದ ಟೂತ್‌ಬ್ರಶ್‌ನ್ನು ನುಂಗಿದ್ದಾರೆ. ಗೋಪಾಕದ ಸಿಂಗ್ ರಾವ್ ಬ್ರಶ್ ನುಂಗಿ ಕಂಗಾಲಾಗಿದ್ದಾರೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ತೆರಳಿದ್ದು, ವೈದ್ಯರೇ ಶಾಕ್ ಆಗಿದ್ದಾರೆ. ಎಲ್ಲ ಪ್ರಯತ್ನದ ನಂತರ ಶಸ್ತ್ರಚಿಕಿತ್ಸೆ ಮೂಲಕ ಮಾತ್ರ ಬ್ರಶ್ ಹೊರತೆಗೆಯಲು ಸಾಧ್ಯ ಎಂದು ವೈದ್ಯರು ಸೂಚಿಸಿದ್ದಾರೆ.
ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಂಬಂಧಿಕರು ಸೂಚಿಸಿದ್ದು, ಅಮೆರಿಕದ ಆಸ್ಪತ್ರೆಯಲ್ಲಿ ಗೋಪಾಲ್ ರಾವ್ ಅಡ್ಮಿಟ್ ಆಗಿದ್ದಾರೆ. ಶಸ್ತ್ರಚಿಕಿತ್ಸೆ ಇಲ್ಲದೆ ಎಂಡೋಸ್ಕೋಪಿ ಮೂಲಕ ಬ್ರಶ್ ಹೊರತೆಗೆಯಲಾಗಿದೆ. ಸರ್ಜರಿ ಇಲ್ಲದೆ ಟೂತ್‌ಬ್ರಶ್ ಹೊರತೆಗೆದ ವೈದ್ಯರ ಸಾಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ.