ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಎಂಟು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿರುವ ಭೂತಾನ್ ದೊರೆ ಜಿಗ್ಮೆ ಖೆಸರ್ ನಾಮಗ್ಯಾಲ್ ವಾಂಗಚುಕ್ ಅವರು ಇದೀಗ ಅಸ್ಸಾಂಗೆ ಆಗಮಿಸಿದ್ದು, ಅವರನ್ನು ಸಿಎಂ ಬಿಸ್ವಾ ಶರ್ಮಾ ಆದರದಿಂದ ಬರಮಾಡಿಕೊಂಡರು.
ಭೂತಾನ್ ದೊರೆ ತಮ್ಮ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದಲ್ಲದೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಭೂತಾನ್ ರಾಜನನ್ನು ಭೇಟಿ ಮಾಡಲಿದ್ದಾರೆ.
ಈ ಭೇಟಿಯು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರ ಮತ್ತು ಮಾದರಿ ಸಹಭಾಗಿತ್ವಕ್ಕೆ ಅವಕಾಶ ಒದಗಿಸಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.