April 6, 2026
Monday, April 6, 2026
spot_img

IPL ನಲ್ಲಿ 200 ವಿಕೆಟ್ ಕಿತ್ತ ಭುವಿ: ಟಾಪ್ 2 ನಲ್ಲಿ ಸ್ಥಾನ ಪಡೆದ RCB ವೇಗದ ಬೌಲರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ಮಹತ್ವದ ದಾಖಲೆ ನಿರ್ಮಾಣವಾಗಿದೆ. ಆರ್‌ಸಿಬಿ ಪರ ಆಡುತ್ತಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಟೂರ್ನಿಯಲ್ಲಿ 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಎರಡನೇ ಬೌಲರ್ ಎಂಬ ಅಪೂರ್ವ ಸಾಧನೆ ಮಾಡಿದ್ದಾರೆ.

ಚಿನ್ನಸ್ವಾಮಿ ಮೈದಾನದಲ್ಲಿ ನಲ್ಲಿ ನಡೆದ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆಯುಷ್ ಅವರ ವಿಕೆಟ್ ಕಬಳಿಸುವ ಮೂಲಕ ಭುವನೇಶ್ವರ್ ಈ ಐತಿಹಾಸಿಕ ದಾಖಲೆ ನಿರ್ಮಿಸಿದರು. ಇದುವರೆಗೆ ಈ ಪಟ್ಟಿಯಲ್ಲಿ ಯುಜ್ವೇಂದ್ರ ಚಾಹಲ್ ಮಾತ್ರ 200ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.

ಇದನ್ನೂ ಓದಿ:

2011ರಿಂದ ಐಪಿಎಲ್‌ನಲ್ಲಿ ಸಕ್ರಿಯವಾಗಿರುವ ಭುವನೇಶ್ವರ್ ಕುಮಾರ್ ಹಲವು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಆರಂಭದಲ್ಲಿ ಪುಣೆ ಪರ ಆಡಿದ ಅವರು, ನಂತರ ದೀರ್ಘಕಾಲ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿದರು. ಬಳಿಕ 2025ರಲ್ಲಿ RCB ಸೇರಿ ತಮ್ಮ ಅನುಭವವನ್ನು ತಂಡಕ್ಕೆ ನೀಡುತ್ತಿದ್ದಾರೆ.

ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಚಹಲ್ 224 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭುವಿ ಈಗ 202 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಸಾಧನೆ ಅವರ ಸತತತೆ ಮತ್ತು ಅನುಭವಕ್ಕೆ ಸಾಕ್ಷಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !