October 11, 2026
Sunday, October 11, 2026
spot_img

ಅವರಿವರ ಮಾತು ಕೇಳಿ ಬಿಡದಿ ಟೌನ್‌ಶಿಪ್‌ ಯೋಜನೆ ಕೈಬಿಡೋದಿಲ್ಲ: ಯತೀಂದ್ರ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಡದಿ ಟೌನ್‌ಶಿಪ್‌ ವಿಚಾರವಾಗಿ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಇತ್ತ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿವರ ಮಾತುಕೇಳಿ ಯೋಜನೆಯನ್ನು ಕೈ ಬಿಡೋ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಟೌನ್ ಶಿಫ್ ಮಾಡುವುದು ಅತ್ಯವಶ್ಯಕವಾಗಿದೆ. ಶೇ.80 ರಷ್ಟು ರೈತರು ಜಮೀನು ಕೊಡಲು ಒಪ್ಪಿದ್ದಾರೆ. ಹೆಚ್ಚಿನ ಮಟ್ಟದ ಪರಿಹಾರಕ್ಕೆ ಒಪ್ಪಿದ್ದಾರೆ. ಕೆಲವರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಜೆಡಿಎಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕೆಲವರು ವಿರೋಧ ಮಾಡುತ್ತಲೇ ಇದ್ದಾರೆ ಹಾಗಂತ ಯೋಜನೆ ಕೈಬಿಡೋಕೆ ಆಗೋದಿಲ್ಲ. ಬೆಂಗಳೂರಿನಲ್ಲಿ ಜನ ಜಾಸ್ತಿ ಭೂಮಿ ಕಡಿಮೆ ಇದೆಯೇನೋ ಅನಿಸ್ತಾ ಇದೆ. ಎಷ್ಟೋ ಜನರಿಗೆ ನಿವೇಶನದ ಅಗತ್ಯ ಇದೆ. ಬೆಂಗಳೂರು ಜನಸಂಖ್ಯೆ ಸ್ಪ್ರೆಡ್ ಆಗಬೇಕಿದೆ. ಬೆಂಗಳೂರು ವಿಸ್ತರಣೆಯ ಅವಶ್ಯಕತೆಯಂತೂ ಇದೆ. ರೈತರೊಂದಿಗೆ ಮಾತುಕತೆ ನಡೆಸಿ, ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮಾಡುತ್ತೇವೆ ಎಂದು ತಿಳಿಸಿದರು.

Must Read