ಹೊಸದಿಗಂತ ವರದಿ, ಬೀದರ್
ಬೀದರನಿಂದ ಬೆಂಗಳೂರಿಗೆ ನಾಗರೀಕ ವಿಮಾನಯಾನ ಸೇವೆ ಪುನರ್ ಪ್ರಾರಂಭವಾಗಲಿದೆ ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಮತ್ತು ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಖಾತೆಯ ರಾಜ್ಯ ಸಚಿವರಾದ ಭಗವಂತ ಖೂಬಾರವರು ತಿಳಿಸಿದ್ದಾರೆ.
ಕೋವಿಡ್ ಹಾಗೂ ಇತರೆ ಕಾರಣದಿಂದಾಗಿ ಬೀದರನಿಂದ ನಾಗರಿಕ ವಿಮಾನಯಾನ ಸೇವೆ ಸ್ಥಗಿತಗೊಂಡಿತ್ತು, ಆದರೆ ಬೀದರ ಜನತೆಗೆ ಬೆಂಗಳೂರಿಗೆ ಹೊರಡಲು ತುಂಬಾ ಅನಾನುಕೂಲವಾಗುತ್ತಿತ್ತು, ಈ ವಿಷಯವನ್ನು ಕೇಂದ್ರ ಸಚಿವರು, ನಾಗರಿಕ ವಿಮಾನಯಾನ ಸಚಿವಾಲಯದ ಗಮನಕ್ಕೆ ತಂದಿದ್ದರು.
ಅದರ ಫಲವಾಗಿ ದಿನಾಂಕ: 24-02-2022 ರಿಂದ ಸದ್ಯ ವಾರಕ್ಕೆ 3 ದಿನ ಮಂಗಳವಾರ, ಗುರುವಾರ ಮತ್ತು ರವಿವಾರ ವಿಮಾನಯಾನ ಸೇವೆ ಬೀದರ ಜನತೆಗೆ ಲಭ್ಯವಾಗಲಿದೆ, ಈ ಮೂರು ದಿನಗಳಂದು ಟ್ರೂಜೇಟ್ ವಿಮಾನ ಸಂಖ್ಯೆ 2ಖಿ625 ಬೆಳಿಗ್ಗೆ 11.25ಕ್ಕೆ ಬೆಂಗಳೂರಿನಿಂದ ಹೊರಟು ಮದ್ಯಾನ 1.10 ಬೀದರ ವಿಮಾನ ನಿಲ್ದಾಣಕ್ಕೆ ತಲುಪಲಿದೆ, ವಿಮಾನಸಂಖ್ಯೆ 2ಖಿ626 ಮಧ್ಯಾಹ್ನ 1.40ಕ್ಕೆ ಬೀದರನಿಂದ ಹೊರಟು ಮಧ್ಯಾಹ್ನ 3.25ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಒಟ್ಟು 1 ಗಂಟೆ 45 ನಿಮಿಷ್ಯದ ಪ್ರಯಾಣವಿರಲಿದೆ.
ಸಮಸ್ತ ಜನತೆ ಬೀದರನಿಂದ ಪುನರ್ ಪ್ರಾರಂಭವಾದ ಈ ವಿಮಾನಯಾನದ ಸೇವೆಯನ್ನು ಸದೂಪಯೋಗಪಡೆದುಕೊಳ್ಳಬೇಕೆಂದು ಕೇಂದ್ರ ಸಚಿವರಾದ ಭಗವಂತ ಖೂಬಾರವರು ಜನತೆಯಲ್ಲಿ ಕೋರಿದ್ದಾರೆ.