ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹಲವು ಭಾಗಗಳಲ್ಲಿ ದಾರಾಕಾರ ಮಳೆ ಸುರಿಯುತ್ತಿದ್ದು, ಬೀದರ್‌ನಲ್ಲಿ ಮಹಾಮಳೆಗೆ ಈವರೆಗೂ ಬರೋಬ್ಬರಿ 90 ಮನೆಗಳು ಧರೆಗೆ ಉರುಳಿವೆ.
ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯ ಎಫೆಕ್ಟ್‌ಗೆ ಒಂದೇ ವಾರದಲ್ಲಿ ಬರೋಬ್ಬರಿ 91ಕ್ಕೂ ಅಧಿಕ ಮನೆಯ ಗೋಡೆಗಳು ಹಾಗೂ ಮೇಲ್ಛಾವಣಿಗಳು ಕುಸಿದು ಬಿದ್ದು ಜನರು ಕಂಗಾಲಾಗಿದ್ದಾರೆ.
ಇಂದು ಸುರಿದ ಧಾರಾಕಾರ ಮಳೆಗೆ ಒಂದೇ ಗ್ರಾಮದ ಅಂಚೆ ಕಚೇರಿ ಸೇರಿದಂತೆ 5ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದು, ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಳೆಯ ರಗಳೆಗೆ ಗಡಿ ಜಿಲ್ಲೆ ಬೀದರ್‌ನ ಜನರು ತತ್ತರಿಸಿ ಹೋಗಿದ್ದಾರೆ.
ಪ್ರತಿದಿನವೂ ಜನರು ಮನೆಗಳು ಉರುಳುವ ಭಯದಲ್ಲೇ ಕಾಲಕಳೆಯುತ್ತಿದ್ದಾರೆ. ರಾತ್ರಿ ನಿದ್ದೆಯೂ ಮಾಡದೆ ಮಳೆ ನಿಲ್ಲುವುದನ್ನು ಎದುರು ನೋಡುತ್ತಿದ್ದಾರೆ.