BIG BOSS | ಸಂಗೀತಾ ಮೇಲೆ ತನಿಷಾ ದ್ವೇಷದ ಮಾತು: ಫ್ಯಾನ್ಸ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನ ಹತ್ತನೇ ಸೀಸನ್‌ಗೆ ಕೇವಲ ಒಂದು ವಾರ ಮಾತ್ರ ಉಳಿದಿದೆ. ಕಳೆದ ವಾರ ಯಾರೂ ಎಲಿಮಿನೇಟ್ ಆಗಿಲ್ಲ, ಹಾಗಾಗಿ ಈ ವಾರ ಮಧ್ಯ ವಾರದ ಎಲಿಮಿನೇಷನ್ ಮಾಡಲಾಗಿದೆ. ಅಚ್ಚರಿ ಎಂದರೆ ಬಿಗ್​ಬಾಸ್​ನಲ್ಲಿ ಬೆಂಕಿ ಅಂತಲೇ ಫೇಮಸ್ ಆಗಿದ್ದ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿದ್ದಾರೆ.

ಸಖತ್ ಸ್ಟ್ರಾಂಗ್ ಎನಿಸಿಕೊಂಡಿದ್ದ ತನಿಶಾ ಎಲಿಮಿನೇಟ್ ಆಗಿದ್ದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದು ಅರ್ಥವಾಗುತ್ತೆ. ಆದ್ರೆ ಇಲ್ಲಿ ಹೇಳಲೇಬೇಕಾದ ಅಂಶ ಅಂದ್ರೆ ತನೀಷಾ ಎಂಬ ಹೆಸರಿನಲ್ಲಿ ಮನೆಗೆ ಬಂದಿದ್ದ ಅವರು ತನೀಶಾ ಬೆಂಕಿ ಎಂದೇ ಹೆಸರುವಾಸಿ. ಮನೆಯಿಂದ ಹೊರ ಬರಬೇಕಾದ್ರೆ ಬೆಂಕಿಯಾಗೇ ಹೊರಬಂದಿದ್ದಾರೆ.

ಫಿನಾಲೆಗೆ ಬರುವುದು ಖಚಿತವಾಗಿದ್ದ ತನೀಷಾಗೆ ಬಿಗ್ ಬಾಸ್ ಆಘಾತ ನೀಡಿದರು. ತನಿಷಾ ನಿಮ್ಮ ಪಯಣ ಇಲ್ಲಿಗೆ ಮುಗಿಯಿತು ಎನ್ನುತ್ತಿದ್ದಂತೆ ತನಿಷಾ ಕಾರ್ತಿಕ್ ಕಡೆ ತಿರುಗಿ ನೀನೆ ಅಲ್ವಾ ನನ್ನನ್ನು ನಾಮಿನೇಟ್ ಮಾಡಿದ್ದು ಥ್ಯಾಂಕ್ಸ್ ಎಂದು ಹೇಳಿದ್ರು. ತನ್ನ ಆತ್ಮೀಯ ಗೆಳೆಯನೆಂದು ಕರೆಸಿಕೊಳ್ಳುತ್ತಿದ್ದ ಕಾರ್ತಿಕ್ ಇದನ್ನು ಕೇಳಿ ಸ್ವಲ್ಪ ಹೊತ್ತು ಬೆಚ್ಚಿಬಿದ್ದ. ಅಷ್ಟೆ ಅಲ್ಲ ಮನೆ ಮಂದಿಗೆ ನಿಮಗೆ ಈಗ ಬಹಳ ಖುಷಿ ಆಗ್ತಿರ್ಬೇಕು ಅಲ್ವಾ ನಾನು ಹೊರಗೆ ಹೋಗ್ತಿರೋದು ಎಂದು ಕೇಳಿದ್ರು. ನಿಮ್ಮಗಳಿಂದ ನನಗೆ ಸಾಕಷ್ಟು ನೋವಾಗಿದೆ ಎಂದು ನೇರವಾಗಿಯೇ ತನಿಷಾ ಕಿಡಿಕಾರಿದ್ದಾರೆ.

ನನ್ನನ್ನು ಮನೆ ಒಳಗೆ ಕೆಟ್ಟದಾಗಿ ಕರೆದುಕೊಂಡ್ರಿ ಕಳುಹಿಸುವಾಗಲೂ ಹಾಗೇ ಕೆಟ್ಟದಾಗಿ ಕಳಿಸುತ್ತಿದ್ದೀರಿ ಯಾಕೆ ಎಂದು ತನಿಷಾ ಬಿಗ್​ಬಾಸ್​ಗೂ ಪ್ರಶ್ನೆ ಮಾಡಿ ಗಳಗಳನೆ ಅತ್ತರು. ಮನೆಯ ಬಹುತೇಕ ಸದಸ್ಯರಿಗೆ ಒಂದೊಂದು ರೀತಿಯಲ್ಲಿ ತನಿಷಾ ಕಡೆಯಿಂದ ಟಾಂಟ್ ಬಂತು. ಆದ್ರೆ ಜೀವದ ಸ್ನೇಹಿತೆಯಂತಿದ್ದ ಸಂಗೀತಾ ಮೇಲೆ ತನಿಷಾ ತುಸು ಹೆಚ್ಚೇ ಸಿಟ್ಟಿದ್ದಂತೆ ಕಂಡಿದೆ. ಯಾಕಂದ್ರೆ ಸಂಗೀತಾ ಮುಖ ನೋಡ್ತಾ ತನಿಷಾ ಇನ್ಮೇಲೆ ಖುಷಿಯಾಗಿರಿ, ಶೃಂಗೇರಿಗೆ ಹೋಗಿ ಹೇಗೆ ರೆಸ್ಪೆಕ್ಟ್ ಕೊಡಬೇಕು ಅನ್ನೋದನ್ನ ಕಲೀತಿನಿ ಅನ್ನೋ ಮಾತನಾಡಿದ್ದಾರೆ. ಹೋಗುವ ಮುನ್ನ ಎಲ್ಲರಿಗೂ ಹಗ್ ಕೊಟ್ಟ ತನಿಷಾ ಸಂಗೀತಾ ಕಡೆ ತಿರುಗಿಯೂ ತನಿಷಾ ನೋಡಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!