ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ಪ್ರವಾಸದ ನಾಲ್ಕನೇ ಟೆಸ್ಟ್ ಪಂದ್ಯದ ಕೊನೆ ದಿನದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರು ಕೇವಲ 10 ರನ್ಗಳಿಂದ ಸೆಂಚುರಿ ಮಿಸ್ ಮಾಡಿಕೊಂಡಿದ್ದಾರೆ.
ಕೆ.ಎಲ್ ರಾಹುಲ್ ಹಾಗೂ ಕ್ಯಾಪ್ಟನ್ ಶುಭ್ಮನ್ ಗಿಲ್ ಇಬ್ಬರೂ ಉತ್ತಮವಾದ ಇನ್ನಿಂಗ್ಸ್ ಕಟ್ಟಿದ್ದರು. ವಿಕೆಟ್ಗಳನ್ನ ಕಾಪಾಡಿಕೊಂಡು ರನ್ಗಳ ಗಳಿಕೆಯು ಮಾಡುತ್ತಿದ್ದರು. ಕೆ.ಎಲ್ ರಾಹುಲ್ ಬ್ಯಾಟಿಂಗ್ ಅತ್ಯುತ್ತಮವಾಗಿ ಮೂಡಿ ಬರುತ್ತಿತ್ತು. ಪಂದ್ಯದಲ್ಲಿ ಒಟ್ಟು 230 ರನ್ಗಳನ್ನ ಎದುರಿಸಿದ್ದ ಅವರು 90 ರನ್ ಗಳಿಸಿ ಆಡುತ್ತಿದ್ದರು. ಸೆಂಚುರಿ ಗಳಿಸುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.ಆದರೆ ಶತಕಕ್ಕೆ ಇನ್ನು ಕೇವಲ 10 ರನ್ ಇರುವಾಗಲೇ ಕೆ.ಎಲ್ ರಾಹುಲ್ ಅವರು ವಿಕೆಟ್ ಒಪ್ಪಿಸಿದ್ದಾರೆ.
ಇನ್ನು ಇನ್ನಿಂಗ್ಸ್ನಲ್ಲಿ 90 ರನ್ ಗಳಿಸಿ ಆಡುವಾಗ ಕೆ.ಎಲ್ ರಾಹುಲ್ ಅವರು ಎಲ್ಬಿಡಬ್ಲುಗೆ ಬಲಿಯಾಗಿದ್ದಾರೆ.
ಇದರೊಂದಿಗೆ, ರಾಹುಲ್ ಈ ಟೆಸ್ಟ್ ಸರಣಿಯಲ್ಲಿ ತಮ್ಮ ಮೂರನೇ ಶತಕವನ್ನು ಪೂರ್ಣಗೊಳಿಸುವ ಅವಕಾಶವನ್ನು ಕಳೆದುಕೊಂಡರು. ಈ ರೀತಿಯಾಗಿ 8 ವರ್ಷಗಳ ನಂತರ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 90 ರನ್ ಗಳಿಸಿ ಔಟಾದ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು. 90 ರನ್ ತಲುಪಿದ ನಂತರ ಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗದಿರುವುದು ಅವರ ವೃತ್ತಿಜೀವನದಲ್ಲಿ ಇದು ಎರಡನೇ ಬಾರಿ. 2017 ರ ಆರಂಭದಲ್ಲಿಯೂ ರಾಹುಲ್ ಆಸ್ಟ್ರೇಲಿಯಾ ವಿರುದ್ಧ 90 ರನ್ ಗಳಿಸಿ ಔಟಾಗಿದ್ದರು.