Friday, November 21, 2025

BIG NEWS | ಶವ ಹೂತಿಟ್ಟ ಪ್ರಕರಣ: ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟ ಬಳಿ ಸ್ಥಳಮಹಜರು ಪ್ರಕ್ರಿಯೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೂರಾರು ಶವ ಹೂಳಲಾಗಿದೆ ಎಂಬ ಪ್ರಕರಣ‌ಕ್ಕೆ ಸಂಬಂಧಿಸಿ ತನಿಖೆ ಇನ್ನಷ್ಟು ತೀವ್ರಗೊಳಿಸಿರುವ ಎಸ್ ಐಟಿ‌ ತಂಡ, ಇಂದು ಮಧ್ಯಾಹ್ನ ದೂರುದಾರನ ಜೊತೆ ತೆರಳಿ ನೇತ್ರಾವತಿ ಸ್ನಾನ ಘಟ್ಟದ ಬಳಿ ಮಹಜರು ಪ್ರಕ್ರಿಯೆ ಆರಂಭಿಸಿದೆ.

ಇದಕ್ಕೂ ಮುನ್ನ ತನಿಕಾಧಿಕಾರಿಗಳಾದ ಅನುಚೇತ್, ಜಿತೇಂದ್ರ ಕುಮಾರ್ ದಯಾಮಾ, ಸಿ.ಎ. ಸೈಮನ್ ತಂದ ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿ ದೂರುದಾರನೊಂದಿಗೆ ಕೆಲವು ತಾಸು ವಿಚಾರಣೆ ನಡೆಸಿದ್ದರು. ಅದಾದ ಬಳಿಕ ಭಾರೀ ಭದ್ರತೆಯಲ್ಲಿ ಆತನನ್ನು ಸ್ಥಳ‌ಮಹಜರಿಗೆ ಕರೆತರಲಾಗಿದೆ.

ಘಟನೆಯ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳಲು ತನಿಖಾ ತಂಡ ನಿರಾಕರಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

error: Content is protected !!