April 15, 2026
Wednesday, April 15, 2026
spot_img

ಟ್ರಾಫಿಕ್ ಜಂಜಾಟಕ್ಕೆ ಬ್ರೇಕ್: ಮೈಸೂರು ರಸ್ತೆಯಿಂದ ನೈಸ್ ರಸ್ತೆಗೆ ಶೀಘ್ರವೇ ಸಿಗಲಿದೆ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಟ್ರಾಫಿಕ್ ಕಿರಕಿರಿಗೆ ಮುಕ್ತಿ ನೀಡಲು ನೈಸ್‌ (NICE) ಸಂಸ್ಥೆ ಸಜ್ಜಾಗಿದೆ. ಮೈಸೂರು ರಸ್ತೆ ಕಡೆಯಿಂದ ಕೆಂಗೇರಿ, ಹೊಸೂರು ಮತ್ತು ತುಮಕೂರು ರಸ್ತೆಗೆ ಸಂಚರಿಸುವ ವಾಹನ ಸವಾರರಿಗೆ ಶೀಘ್ರದಲ್ಲೇ ಸಿಹಿಸುದ್ದಿ ಸಿಗಲಿದೆ.

ದೀಪಾಂಜಲಿನಗರ ಜಂಕ್ಷನ್‌ನಿಂದ ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಸಂಪರ್ಕಿಸುವ 1.5 ಕಿ.ಮೀ ಉದ್ದದ ಹೊಸ ರಸ್ತೆ ಮಾರ್ಗ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಈ ಲಿಂಕ್ ರಸ್ತೆ ಪೂರ್ಣಗೊಂಡರೆ ಸಾರ್ವಜನಿಕರು ನೇರವಾಗಿ ನೈಸ್ ರಸ್ತೆಯನ್ನು ಪ್ರವೇಶಿಸಬಹುದು.

ಮೈಸೂರು ರಸ್ತೆಯ ದಟ್ಟಣೆಯಲ್ಲಿ ಸಿಲುಕದೆ ವೇಗವಾಗಿ ಸಂಚರಿಸಬಹುದು. ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ ಹಾಗೂ ತುಮಕೂರು ರಸ್ತೆಗೆ ಹೋಗುವವರಿಗೆ ಈ ಮಾರ್ಗ ವರದಾನವಾಗಲಿದೆ. ಸಿಗ್ನಲ್‌ಗಳ ಕಿರಿಕಿರಿ ತಪ್ಪುವುದರಿಂದ ಪ್ರಯಾಣದ ಅವಧಿ ಗಣನೀಯವಾಗಿ ಇಳಿಕೆಯಾಗಲಿದೆ.

ಪ್ರಸ್ತುತ ರಸ್ತೆಯ ಫಿನಿಶಿಂಗ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ಈ ಮಾರ್ಗ ಅಧಿಕೃತವಾಗಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !