BIG NEWS | ಬಂಟ್ವಾಳದಲ್ಲಿ ಪಿಕಪ್ ಚಾಲಕನ ಬರ್ಬರ ಹತ್ಯೆ, ಸ್ಥಳಕ್ಕೆ ಪೊಲೀಸರ ದೌಡು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಿಕಪ್ ಚಾಲಕನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಇಂದು ನಡೆದಿದೆ‌.

ಕೊಳತ್ತಮಜಲು ನಿವಾಸಿ ರಹೀಮ್ ಎಂಬಾತ ಕೊಲೆಗೀಡಾದವರು ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಡಿದು ಪರಾರಿಯಾಗಿದ್ದಾರೆ.

ರಹೀಮ್ ಜೊತೆ ಇನ್ನೊಬ್ಬ ಕೂಡ ಇದ್ದು, ಆತನಿಗೂ ಕಡಿಯಲಾಗಿದೆ. ಆದರೆ ಆತನಿಗೆ ಕೈಗೆ ಗಾಯ ವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!