ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook) ಮತ್ತು ಫೇಸ್‌ಬುಕ್ ಮೆಸೇಂಜರ್ (Facebook Messenger) ಭಾರತ ಸೇರಿ ವಿಶ್ವದ್ಯಾಂತ ಸರ್ವರ್ ಡೌನ್ ಆಗಿದ್ದು, ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗದ ಪರದಾಡುತ್ತಿದ್ದಾರೆ.
ಜಗತ್ತಿನಾದ್ಯಂತ ಮಂಗಳವಾರ ರಾತ್ರಿ 9 ಗಂಟೆಯಿಂದ ಸ್ಥಗಿತಗೊಂಡಿದೆ. ಪ್ರಪಂಚದಾದ್ಯಂತದ ಬಳಕೆದಾರರು ತಮ್ಮ ಫೇಸ್ಬುಕ್ ಪ್ರೊಫೈಲ್ಗಳನ್ನು ಲಾಗ್ ಇನ್ ಮಾಡುವಲ್ಲಿ ಮತ್ತು ಪ್ರವೇಶಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.
ಜಗತ್ತಿನಲ್ಲಿ ಸುಮಾರು 200 ಕೋಟಿಗೂ ಅಧಿಕ ಫೇಸ್‍ಬುಕ್ ಬಳಕೆದಾರರಿದ್ದಾರೆ. 41 ಕೋಟಿಗೂ ಅಧಿಕ ಫೇಸ್‍ಬುಕ್ ಬಳಕೆದಾರರು ಮತ್ತು 21 ಕೋಟಿ ಅಧಿಕ ಇನ್‍ಸ್ಟಾಗ್ರಾಮ್ ಬಳಕೆದಾರರು ಇದ್ದಾರೆ.